EXIT POLL: ಶಿಕಾರಿಪುರದಲ್ಲಿ ಸೋಲ್ತಾರಾ ಯಡಿಯೂರಪ್ಪ ಮಗ ವಿಜಯೇಂದ್ರ..?

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಜನ ನಾಯಕ ಬಿ ಎಸ್​ ಯಡಿಯೂರಪ್ಪ ಅವರು ಬಿಟ್ಟುಕೊಟ್ಟ ಕ್ಷೇತ್ರದಲ್ಲಿ ಅವರ ಮಗ ಬಿ ವೈ ವಿಜಯೇಂದ್ರ ಸ್ಪರ್ಧಿಸಿದ್ದಾರೆ.

ಹಾಗಾದರೆ ಶಿಕಾರಿಪುರದಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಗೆಲ್ತಾರಾ..? ಸೋಲ್ತಾರಾ..?

ಜಾತಿ ಲೆಕ್ಕಾಚಾರ:

ಲಿಂಗಾಯತರು: 57 ಸಾವಿರ, ಬಂಜಾರರು – 40 ಸಾವಿರ, ಕುರುಬರು – 18 ಸಾವಿರ, ಈಡಿಗ – 14 ಸಾವಿರ, ಒಕ್ಕಲಿಗ – 10 ಸಾವಿರ, ಬ್ರಾಹ್ಮಣರು – 4 ಸಾವಿರ, ಮುಸಲ್ಮಾನರು – 35 ಸಾವಿರ

ಚುನಾವಣೋತ್ತರ ಸಮೀಕ್ಷೆ:

ಶಿಕಾರಿಪುರದಲ್ಲಿ ವಿಜಯೇಂದ್ರ ಸೋತರೂ ಅಚ್ಚರಿಯಿಲ್ಲ. ಕಾಂಗ್ರೆಸ್​​ನಿಂದ ಟಿಕೆಟ್​ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್​ ಪಿ ನಾಗರಾಜ ಗೌಡ ಅವರು ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕಾಂಗ್ರೆಸ್​ ಅಭ್ಯರ್ಥಿ ಗೋಣಿ ಮಾಲತೇಶ್​ ಮೂರನೇ ಸ್ಥಾನಕ್ಕೆ ಕುಸಿಯಬಹುದು ಎನ್ನಲಾಗಿದೆ.

ಕಾರಣಗಳು:

1. 40 ವರ್ಷಗಳಿಂದ ಶಿಕಾರಿಪುರ ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿತ್ತು. ಈಗ ಮತ್ತೆ ವಿಜಯೇಂದ್ರ ಅವರನ್ನು ಗೆಲ್ಲಿಸಿದರೆ ಮತ್ತೆ ಅದೇ ಕುಟುಂಬದ ಕೈಗೆ ಕ್ಷೇತ್ರವನ್ನು ಕೊಡಬೇಕಾಗುತ್ತದೆ. ಹೀಗಾಗಿ ಕ್ಷೇತ್ರದಲ್ಲಿ ಕೇಳಿಬಂದಿರುವ ಬದಲಾವಣೆ ಮಾತು

2. ದೀರ್ಘಕಾಲದಿಂದ ಕ್ಷೇತ್ರದಲ್ಲಿ ಸಾದರ ಲಿಂಗಾಯತರಿಗೆ ಅಧಿಕಾರ ಸಿಕ್ಕಿಲ್ಲ. ಸಾದರ ಲಿಂಗಾಯತರು ಬಂಡಾಯ ಅಭ್ಯರ್ಥಿ ಎಸ್​ ಪಿ ನಾಗರಾಜಗೌಡ ಅವರ ಪರವಾಗಿ ಸಾದರ ಲಿಂಗಾಯತರು ಮತ ಹಾಕಿರುವ ಸಾಧ್ಯತೆ

3. ಒಳ ಮೀಸಲಾತಿ ವಿರುದ್ಧ ಬಂಜಾರ ಸಮುದಾಯದ ಹೊಡೆತ ವಿಜಯೇಂದ್ರಗೆ ಒಳ ಏಟು ಕೊಟ್ಟಿದೆ.

4. ಮುಸಲ್ಮಾನ ಮತಗಳು ಈ ಬಾರಿ ಬಂಡಾಯ ಅಭ್ಯರ್ಥಿಗೆ ಹೋಗಿರುವ ಸಾಧ್ಯತೆ