ಗುಜರಾತ್ : ಅಡುಗೆ ಸಿಬ್ಬಂದಿಯಿಂದ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಸೆರೆ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ಪಂಜಾಬ್​ನ ಮೊಹಾಲಿಯಲ್ಲಿರುವ ಚಂಡೀಗಢ ವಿವಿಯಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಆದ ಪ್ರಕರಣ ತನಿಖೆಯಲ್ಲಿರುವಾಗಲೇ, ಅಂತಹದ್ದೇ ಮತ್ತೊಂದು ಪ್ರಕರಣ ಗುಜರಾತ್‌ನ ಸರ್ಕಾರಿ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದಿದೆ.

ದಕ್ಷಿಣ ಗುಜರಾತ್‌ ನಲ್ಲಿರುವ ಏಕಲವ್ಯ ಕನ್ಯಾ ಸಾಕ್ಷರತಾ ನಿವಾಸ ಶಾಲೆಯಲ್ಲಿ ಹಾಸ್ಟೆಲ್ ಮೆಸ್ ಸಿಬ್ಬಂದಿಯೇ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರಿಗೆ ಹಾಗೂ ಪೊಲೀಸರಿಗೆ ಲಿಖಿತ ಅರ್ಜಿ ಮೂಲಕ ದೂರು ನೀಡಿದ್ದಾರೆ. ಯಾರಾದರೂ ಇಂತಹ ವಿಷಯದಲ್ಲಿ ಭಾಗಿಯಾಗಿದ್ದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಲ್ಸಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ ಝಲಾ ತಿಳಿಸಿದ್ದಾರೆ.

ಇದನ್ನೂ ಓದಿ : Chandigarh University : ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಲೀಕ್ : ಪ್ರತಿಭಟನೆ

ವಿದ್ಯಾರ್ಥಿನಿರು ಸ್ನಾನ ಮಾಡುತ್ತಿರುವುದನ್ನು ವೀಡಿಯೋ ಮಾಡಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಲಿಖಿತ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ನಾಲ್ವರು ಪುರುಷರು ಅಡುಗೆಯವರಿದ್ದು, ಈ ಪೈಕಿ ಒಬ್ಬನ ಬಳಿ ಮಾತ್ರ ಆಂಡ್ರಾಯ್ಡ್ ಫೋನ್ ಇದೆ. ಮೊಬೈಲ್ ಫೋನ್‌ ಅನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಲೆಯ ಪ್ರಾಂಶುಪಾಲರಾದ ನೀತಾ ಚೌಧರಿ, ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಅನ್ನೋದು ವಿದ್ಯಾರ್ಥಿಗಳ ಪ್ರಾಥಮಿಕ ದೂರು. ಅಲ್ಲದೇ ಅವರು ಮಹಿಳಾ ಅಡುಗೆ ಸಿಬ್ಬಂದಿಯನ್ನೇ ನೇಮಕ ಮಾಡುವಂತೆ ಬೇಡಿಕೆಯಿಟ್ಟಿದ್ದರು ಎಂದು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ. ಇದನ್ನೂ ಓದಿ : ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಲೀಕ್ ಪ್ರಕರಣ : ಮೂವರ ಬಂಧನ, ವಾರ್ಡನ್ ಸಸ್ಪೆಂಡ್

LEAVE A REPLY

Please enter your comment!
Please enter your name here