Varun Gandhi: ತನ್ನ ಧಾನ್ಯಕ್ಕೆ ಬೆಂಕಿ ಹಚ್ಚಿದ ರೈತ – ಇದು ಅನ್ನದಾತರ ದಯನೀಯ ಸ್ಥಿತಿ – ವರುಣ್ ಗಾಂಧಿ ಮಾತು

ಹೊಸ ಕೃಷಿ  ಕಾಯ್ದೆಗಳು.. ಇತ್ತೀಚಿಗೆ ಲಖಿಮ್ ಪುರ ಹತ್ಯಾಕಾಂಡ.. ಹೀಗೆ  ರೈತರ ವಿಚಾರಗಳಿಗೆ ಸ್ಪಂದಿಸುತ್ತಿರುವ ಬಿಜೆಪಿ ಸಂಸದ  ವರುಣ್ ಗಾಂಧಿ ಇದೀಗ ದೇಶದ ಕೃಷಿ  ವಿಧಾನಗಳ  ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಸಂಬಂಧ  ಟ್ವೀಟ್ ಮಾಡಿದ್ದಾರೆ.

ಅನ್ನದಾತರ ಹತ್ಯಾಕಾಂಡ  ನಡೆದ  ಲಖಿಮ್ ಪುರ ಖೇರಿಯ  ಓರ್ವ ರೈತ, ತಾನೇ ಬೆಳೆದ  ಧಾನ್ಯಗಳನ್ನು  ಮಾರಾಟ  ಮಾಡಲು ಸಾಧ್ಯವಾಗದೆ ರಾಶಿಗೆ  ಬೆಂಕಿ ಹಚ್ಚುತ್ತಿರುವ ಮನಕಲಕುವ ವಿಡಿಯೋ ಒಂದನ್ನು ಶೇರ್ ಮಾಡಿರುವ ವರುಣ್ ಗಾಂಧಿ, ಉತ್ತರ ಪ್ರದೇಶದ ಒಬ್ಬ ರೈತ ತಾನು ಬೆಳೆದ ಧಾನ್ಯಾವನ್ನು ಮಾರಾಟ ಮಾಡಲು ಕಳೆದ  15 ದಿನಗಳಿಂದ ಕೃಷಿ  ಮಾರುಕಟ್ಟೆಗೆ ಚಪ್ಪಲಿ ಸವೆಯುವ ರೀತಿ ತಿರುಗಿದರೂ ಪ್ರಯೋಜನ  ಆಗಿಲ್ಲ. ಇದರಿಂದ  ಬೇಸತ್ತ ರೈತ ತಾನು ಕಷ್ಟಪಟ್ಟು ಬೆಳೆದ  ಬೆಳೆಗೆ ಬೆಂಕಿ ಹಚ್ಚಿದ್ದಾರೆ. ಈ ವ್ಯವಸ್ಥೆ ರೈತರ ಬದುಕನ್ನು  ಎಲ್ಲಿಗೆ ಕೊಂಡೋಯುತ್ತಿದೆ. ಕೃಷಿ  ವಿಧಾನಗಳ  ಬಗ್ಗೆ ಪುನರ್ ಚಿಂತನೆ  ನಡೆಸಬೇಕಿರುವುದು ಈಗ ಎಲ್ಲಕ್ಕಿಂತ ದೊಡ್ಡ ಕೆಲಸ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿಗೆ ಲಖಿಮ್ ಪುರ ಖೇರಿ ಹತ್ಯಾಕಾಂಡ ನಡೆಸಿದ  ಕೇಂದ್ರ ಮಂತ್ರಿ ಪುತ್ರನ  ಬಂಧನಕ್ಕೆ ಒತ್ತಾಯಿಸಿದ ಬೆನ್ನಲ್ಲೇ ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿನ ಸ್ಥಾನವನ್ನು ವರುಣ್ ಗಾಂಧಿ  ಕಳೆದುಕೊಂಡಿದ್ದರು.

ಆದರೆ ಇದಕ್ಕೆ ಕೇರ್ ಮಾಡದ ವರುಣ್ ಗಾಂಧಿ, ರೈತ ಹೋರಾಟ ಬೆಂಬಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ವಿಡಿಯೋ ಶೇರ್ ಮಾಡಿ  ಬಿಜೆಪಿಗೆ ತಿರುಗೇಟು ನೀಡಿದ್ದರು.

LEAVE A REPLY

Please enter your comment!
Please enter your name here