ವಡನ್​ಬೈಲ್​ ಪದ್ಮಾವತಿ ದೇವಾಲಯದಲ್ಲಿ 11 ದಿನ ಪೂಜೆ, ನಾಗದೋಷ ಪೂಜೆ ಇರಲ್ಲ

ಜೋಗ್​ಫಾಲ್ಸ್ (Jog Falls)​ ಬಳಿ ಇರುವ ಪ್ರಸಿದ್ಧ ವಡನ್​ಬೈಲ್​ ಪದ್ಮಾವತಿ ದೇವಾಲಯದಲ್ಲಿ 11 ದಿನಗಳವರೆಗೆ ದೈನಂದಿನ ಪೂಜೆ ಮತ್ತು ನಾಗದೋಷ ಪೂಜೆ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇವಾಲಯದ ಧರ್ಮದರ್ಶಿ ಆಗಿರುವ ವೀರರಾಜ್​ ಜೈನ್​ ಅವರ ಸಹೋದರರು ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಸೆಪ್ಟೆಂಬರ್​ 23ರ ಶನಿವಾರದಿಂದ ಅಕ್ಟೋಬರ್​ 3ರ ಸೋಮವಾರದವರೆಗೆ ಪೂಜಾ ಕಾರ್ಯಗಳು ನಡೆಯಲ್ಲ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಹಕರಿಸಬೇಕಾಗಿ ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here