No Result
View All Result
ಶಿವಮೊಗ್ಗ ಜಿಲ್ಲೆಯ ವಡನ್ಬೈಲ್ ಪದ್ಮಾವತಿ ಬಸದಿ ಗುರುಗಳಾದ ಧರ್ಮದರ್ಶಿ ಹೆಚ್ ಕೆ ವೀರರಾಜ್ ಜೈನ್ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸಹೋದರ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜೋಗ ಮತ್ತು ಕಾರ್ಗಲ್ ನಡುವೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಮತ್ತು ಗುರುಗಳು ಪ್ರಯಾಣಿಸುತ್ತಿದ್ದ ಒಮಿನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಗುರುಗಳಾದ ವೀರರಾಜ್ ಜೈನ್ ಅವರಿಗೆ ಗಂಭೀರ ಪೆಟ್ಟುಬಿದ್ದಿದೆ. ಇವರಿಗೆ 75 ವರ್ಷ ವಯಸ್ಸು. ಇವರ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಶಿಮಮೊಗ್ಗ ಜಿಲ್ಲೆಯ ಜೋಗಫಾಲ್ಸ್ನಿಂದ 8 ಕಿಲೋ ಮೀಟರ್ ದೂರದಲ್ಲಿರುವ ಶಕ್ತಿ ದೇವತೆ ವಡನ್ಬೈಲ್ ಪದ್ಮಾವತಿ ಬಸದಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.
ಹಾವಿನ ಹುತ್ತದಿಂದ ಒಳಗೊಂಡಿರುವ ಬಸದಿ ಇಲ್ಲಿಯ ವಿಶೇಷ. ವಡನ್ಬೈಲ್ ಪದ್ಮಾವತಿಗೆ ಬಳೆ ಹರಕೆ ಕೊಡುವುದು ಪ್ರಮುಖ ವಿಶೇಷ. ಹೀಗಾಗಿ ಈ ದೇವಿಯನ್ನು ಬಳೆ ಪದ್ಮಾವತಿ ಎಂದೂ ಭಕ್ತರು ಪೂಜಿಸುತ್ತಾರೆ.
ಆರಂಭದಲ್ಲಿ ನಾಸ್ತಿಕರಾಗಿದ್ದ ವೀರರಾಜ್ ಜೈನ್ ಅವರು 1965ರಲ್ಲಿ ಪದ್ಮಾವತಿ ದೇವಿಯ ಕಾರ್ಣಿಕಕ್ಕೆ ಶರಣಾಗಿ ತಮ್ಮ ವೃತ್ತಿಗೆ ರಾಜೀನಾಮೆ ಕೊಟ್ಟು ದೇವಿಯ ಸೇವೆಯಲ್ಲೇ ತೊಡಗಿಸಿಕೊಂಡಿದ್ದರು.
ದೇವಸ್ಥಾನದಲ್ಲಿ ಸದ್ಯಕ್ಕೆ ಹೊಸ ನಿರ್ಮಾಣ ಕಾರ್ಯಗಳೂ ನಡೆಯುತ್ತಿವೆ.
No Result
View All Result
error: Content is protected !!