ADVERTISEMENT
ರಾಜ್ಯದಲ್ಲಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿರುವ ಕಾಂಗ್ರೆಸ್ ಸರ್ಕಾರ ಖಾಸಗಿ ಬಸ್ಗಳಲ್ಲೂ ಉಚಿತ ಪ್ರಯಾಣ ಘೋಷಿಸಬೇಕು ಎಂದು ಮಾಜಿ ಸಚಿವ ಮತ್ತು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಅವರು ಆಗ್ರಹಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್ ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ.ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು.
ಮಾಜಿ ಸಚಿವ ವಿ ಸುನಿಲ್ ಕುಮಾರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಆದರೆ ಸುನಿಲ್ ಕುಮಾರ್ ಅವರ ಈ ಟ್ವೀಟ್ಗೆ ಜನ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡಿದ್ದಾರೆ.
ಮಾಜಿ ಮಂತ್ರಿ ಸುನಿಲ್ಗೆ ಹಿಗ್ಗಾಮುಗ್ಗಾ ತರಾಟೆ: ಕಾಮೆಂಟ್ಗಳು ಹೀಗಿವೆ:
ಈ ಭಾಗದ ಜನರೇ ಅಲ್ವೇನ್ರೀ ಮನೆಗಳ ಮುಂದೆ ಕಾಂಗ್ರೆಸ್ಸ್ ನಾಯಿಗಳಿಗೆ ಗೇಟ್ ಒಳಗೆ ಪ್ರವೇಶವಿಲ್ಲ ಇದು ಭಜರಂಗದಳದವರ ಮನೆ ನಮಗೆ ಬಿಟ್ಟಿ ಭಾಗ್ಯ ಬೇಡ ಅಂಥಾ ಹಾಕಿದ್ದು…
ನಾಲ್ಕು ವರ್ಷ ಅಧಿಕಾರದಲ್ಲಿದ್ರಲ್ಲ, ಕಡಲೆಕಾಯಿ ತಿಂತಿದ್ರಾ? ಜನರ ಒಳ್ಳೆಯದಕ್ಕೆ ನೀವು ಮಾಡಿದ ಒಂದಾದರೂ ಒಳ್ಳೆಯ ಕೆಲಸ ಹೇಳಿ. ನಾಚಿಕೆಯಾಗುವುದಿಲ್ವಾ ನಿಮಗೆ?!?
ನಿಮ್ಮ ಸರ್ಕಾರವು ಈ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳನ್ನು ಏಕೆ ಪ್ರಾರಂಭಿಸಲಿಲ್ಲ?
ಯೋವ್ ತಲೆ ಕೆಟ್ಟಿದೆಯೇನಯ್ಯ ನಿನಗೆ!? ಯಾವನವನು ನಿನ್ನ ಟ್ವಿಟರ್ ಹ್ಯಾಂಡಲ್ ನಿರ್ವಹಿಸುತ್ತಿರೋನು, ಅಡ್ಡ ಕಸುಬಿ!? ನೀನೊಬ್ಬ ಎಮ್ಮೆಲ್ಲೆ, ಎಮ್ಮೆ ಅಲ್ಲ. ಜವಾಬ್ದಾರಿಯುತವಾಗಿ ಮಾತಾಡು. ಇಷ್ಟು ವರ್ಷ ಶಾಸಕನಾಗಿ ಆಯ್ಕೆ ಆಗ್ತಾ ಬಂದಿರೋನು ಸರ್ಕಾರಿ ಬಸ್ ಸೇವೆ ಯಾಕಪ್ಪಾ ಕೊಡಲಿಲ್ಲ!?
ನೀವು ಏಷ್ಟು ವರ್ಷಗಳಿಂದ ಎಂಎಲ್ಎ ಆಗಿದ್ದಿರ ಆದರೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿಲ್ಲ ಅಂದ್ರೆ ಏನ್ ಅಭಿವೃದ್ದಿ ಮಾಡಿದ್ದೀರಾ ಮಾನ್ಯ ಸುನಿಲ್ ಕುಮಾರ್ ಅವರೆ.
ಇಷ್ಟು ಬಾರಿ MLA ಆಗಿರುವಿರಿ! ಎಷ್ಟು ಕಡೆ ನಮ್ಮ ಕಾರ್ಕಳ, ಉಡುಪಿಯ ಜನತೆಗೆ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದೀರಿ?
ಯಾಕೆ ಇಷ್ಟು ವರ್ಷ ಅದಿಕಾರ ಅನುಭವಿಸಿ ಯಾಕೆ ಅಲ್ಲಿ ಬಸ್ಸಿನ ವ್ಯವಸ್ಥೆ ಮಾಡಿಲ್ಲಾ ಇದು ಖಾಸಗಿ ಬಸ್ಸಿಗೆ ಯಾಕೆ ಪ್ರೀ ಕೊಡಬೇಕು ಬೆಕಿದ್ದರೆ ಸರ್ಕಾರಿ ಬಸ್ಸಿನಲ್ಲಿ ಓಡಾಡಲಿ
10 ವರ್ಷ mla ಆದರು ಹೆಚ್ಚು ಸರ್ಕಾರಿ ಬಸ್ ಹಾಕುವುದಕ್ಕೆ ಆಗಿಲ್ಲ.
ನೀವು ಇಷ್ಟು ವರ್ಷದಿಂದ MLA ಆಗಿದ್ದೀರ ಕೇವಲ ಕಾರ್ಕಳದ ಜನತೆಗೆ ಈ ಸೌಲಭ್ಯ ನೀಡಿ ನೋಡಿ ಮೊದಲುಫ್ರೀ ಕೊಟ್ರೆ ಪಾಕಿಸ್ತಾನ ಶ್ರೀಲಂಕಾ ಆಗ್ತದೆ ಎಂದು ಬೋಬ್ಬಿಡ್ತಾ ಇದ್ದ ಬಿಜೆಪಿಯವರು ಈಗ ಈ ಸೌಲಭ್ಯ ಯಾವಾಗ ಜಾರಿ ಮಾಡ್ತೀರಾ ಎಂದು ಕಾತುರದಿಂದ ಕಾಯ್ತಾ ಇದ್ದಾರೆ ನಾಚಿಕೆ ಆಗ್ಬೇಕು
ಮುಂಚೆ ಇಂದ ಈ ಸಮಸ್ಯೆ ಇದೆ ಅಂತ ಗೊತ್ತಿದ್ರೆ ನಿಮ್ಮ ಸರಕಾರ ಕಳೆದ ೪ ವರ್ಷ ಏನ್ ಮಾಡಿದ್ರಿ? ಯಾವ ಬಯಲಲ್ಲಿ ಕಳೆ ಕೀಳ್ತಾ ಇದ್ರಿ? ನಾಚಿಕೆ ಅಲ್ವಾ ಹೀಗೆ ಬಂದು ಬರ್ಯಕ್ಕೆ.
ನೀವು ಏಷ್ಟು ವರ್ಷಗಳಿಂದ ಎಂಎಲ್ಎ ಆಗಿದ್ದಿರ ಆದರೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿಲ್ಲ ಅಂದ್ರೆ ಏನ್ ಅಭಿವೃದ್ದಿ ಮಾಡಿದ್ದೀರಾ ಮಾನ್ಯ ಸುನಿಲ್ ಕುಮಾರ್ ಅವರೆ.
ADVERTISEMENT