ಶೇಕಡಾ 95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ – ಉತ್ತರಪ್ರದೇಶ ಬಿಜೆಪಿ ಸಚಿವನ ಮಾತು..!

ದೇಶದಲ್ಲಿ ಶೇಕಡಾ 95ರಷ್ಟು ಮಂದಿಗೆ ಪೆಟ್ರೋಲೇ ಬೇಕಾಗಿಲ್ಲ ಎಂದು ಉತ್ತರಪ್ರದೇಶದ ಬಿಜೆಪಿ ಸರ್ಕಾರದ ಸಚಿವರೊಬ್ಬರು ಹೇಳಿದ್ದಾರೆ. ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

`ಪೆಟ್ರೋಲ್, ಡೀಸೆಲ್ ಬೆಲೆ ವಿಚಾರಕ್ಕೆ ಬರುವುದಾದ್ರೆ, ನಾಲ್ಕು ಚಕ್ರದ ವಾಹನಗಳನ್ನು ಬಳಸುವವರು ಬೆರಳಣಿಕೆಯಷ್ಟು ಮಂದಿ ಮಾತ್ರ ಮತ್ತು ಅವರಿಗಷ್ಟೇ ಪೆಟ್ರೋಲ್ ಬೇಕಾಗಿದೆ. ಸದ್ಯ ಸಮಾಜದಲ್ಲಿರುವ ಶೇಕಡಾ 95ರಷ್ಟು ಮಂದಿಗೆ ಪೆಟ್ರೋಲ್ ಅಗತ್ಯವಿಲ್ಲ’ ಎಂದು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವ ಉಪೇಂದ್ರ ತಿವಾರಿ ಹೇಳಿದ್ದಾರೆ.

`ಸರ್ಕಾರ 100 ಕೋಟಿಗೂ ಅಧಿಕ ಮಂದಿಗೆ ಉಚಿತ ಲಸಿಕೆ ನೀಡಿದೆ. ಉಚಿತ ಕೋವಿಡ್ ಚಿಕಿತ್ಸೆ ನೀಡಿದೆ. ಮನೆ ಬಾಗಿಲಿಗೆ ಔಷಧ ಹಂಚಿಕೆ ಮಾಡಲಾಗಿದೆ’ ಎನ್ನುವ ಮೂಲಕ ಬೆಲೆ ಏರಿಕೆ ಸಮರ್ಥಿಸಿಕೊಂಡಿದ್ದಾರೆ.

ಅಸ್ಸಾA ಬಿಜೆಪಿ ಅಧ್ಯಕ್ಷ `ಒಂದು ವೇಳೆ ಪೆಟ್ರೋಲ್ ದರ 200 ರೂಪಾಯಿ ದಾಟಿದರೆ ಆಗ ಬೈಕ್‌ನಲ್ಲಿ ಮೂವರು ಹೋಗಲು ಅನುಮತಿ ನೀಡಲಾಗುತ್ತದೆ’ ಎಂದಿದ್ದರು. ಕೇಂದ್ರ ಸಚಿವರ ರಾಮೇಶ್ವರ್ ತೇಲಿ `ಉಚಿತ ಕೋವಿಡ್ ಲಸಿಕೆ ಕೊಟ್ಟಿಲ್ವಾ..?’ ಎನ್ನುವ ಮೂಲಕ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here