ವೇದಿಕೆಯಲ್ಲಿದ್ದ ಸಣ್ಣ ಮರಳಿನ ಚೀಲಕ್ಕೆ ಕಾಲು ತಗುಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎಡವಿ ಬಿದ್ದಿದ್ದಾರೆ.
ಕೊಲರೇಡೋದಲ್ಲಿನ ವೈಮಾನಿಕ ದಳದ ಅಕಾಡೆಮಿಯ ಪದವಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಎಡವಿ ಬಿದ್ದ ಕೂಡಲೇ ಜೋ ಬೈಡನ್ಗೆ ಸಹಾಯಕರು ನೆರವಾಗಿದ್ದಾರೆ. ಸದ್ಯ ಅವರು ಆರೋಗ್ಯವಾಗಿಯೇ ಇದ್ದಾರೆ ಎಂದು ವೈಟ್ ಹೌಸ್ ಕಮ್ಯುನಿಕೇಷನ್ ಡೈರೆಕ್ಟರ್ ತಿಳಿಸಿದ್ದಾರೆ.
ಚಿಕ್ಕ ಮರಳಿನ ಚೀಲ ಕಾಲಿಗೆ ತಗುಲಿದ ಕಾರಣ ಎಡವಿ ಬಿದ್ದೆ ಎಂದು ಜೋ ಬೈಡನ್ ತಿಳಿಸಿದ್ದಾರೆ.
80 ವರ್ಷದ ಜೋ ಬೈಡನ್ ಅಮೆರಿಕಾ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವವರಲ್ಲಿಯೇ ಅತ್ಯಧಿಕ ವಯಸ್ಸಿನ ಸೀನಿಯರ್ ನಾಯಕ.
ADVERTISEMENT
ADVERTISEMENT