UPSC 2021 ಟಾಪರ್ ಶೃತಿ ಶರ್ಮಾ IAS ಪ್ರೆಪರಶನ್ ಗುಟ್ಟನ್ನು ವಿವರಿಸಿದ್ದಾರೆ. ಸಿವಿಲ್ಸ್ ಪಾಸ್ ಆಗುತ್ತೇನೆ ನಂಬಿಕೆ ಇತ್ತು. ಆದರೆ, ಟಾಪರ್ ಆಗಿ ನಿಲ್ಲುತ್ತೇನೆ ಎಂದು ಊಹೆ ಮಾಡಿರಲಿಲ್ಲ. ರಿಸಲ್ಟ್ ಬಂದಾಗ ಒಂದು ಕ್ಷಣ ನನ್ನನ್ನು ನಾನೇ ನಂಬದಾದೆ. ಎರಡೆರಡು ಬಾರಿ ಫಲಿತಾಂಶ ನೋಡಿದಾಗಲೇ ನನಗೆ ನಂಬರ್ ಒನ್ Rank ಬಂದಿರುವುದನ್ನು ಖಚಿತಪಡಿಸಿಕೊಂಡೆ.. ಪ್ರತಿಕ್ಷಣವೂ ನನ್ನನ್ನು ಪ್ರೋತ್ಸಾಹಿಸಿದ ತಂದೆ ತಾಯಿ, ಟೀಚರ್ಸ್, ಗೆಳೆಯರಿಗೆ ಈ ಗೆಲುವು, ಯಶಸ್ಸು ಸಮರ್ಪಣೆ ಎಂದು ಶ್ರುತಿ ಶರ್ಮಾ ತಿಳಿಸಿದ್ದಾರೆ.
ಶೃತಿ ಶರ್ಮಾ ತಾವು UPSC ಪಾಸ್ ಆಗಲು ಅನುಸರಿಸಿದ ವಿಧಾನಗಳನ್ನು ಹಂಚಿಕೊಂಡಿದ್ದಾರೆ. ಅವನ್ನು ಕೇವಲ UPSC ಗೆ ಮಾತ್ರವಲ್ಲ ಎಲ್ಲಾ ಪರೀಕ್ಷೆ ಗಳಿಗೂ ಅನ್ವಯಿಸಿಕೊಳ್ಳಬಹುದು.
ಶೃತಿ ಶರ್ಮಾ ಟಿಪ್ಸ್
* ಎಲ್ಲವನ್ನು ಓದುವುದಕ್ಕೆ ಆಗುವುದಿಲ್ಲ. ಹೀಗಾಗಿ ಏನನ್ನು ಓದಬೇಕು, ಏನನ್ನು ಓದಬಾರದು ಎಂಬ ಬಗ್ಗೆ ಖಚಿತವಾದ, ಯೋಜನಾಬದ್ದವಾದ ಪ್ರಣಾಳಿಕೆ ರೂಪಿಸಿಕೊಂಡು ಪರೀಕ್ಷೆಗೆ ಸನ್ನದ್ಧವಾದರೆ ವಿಜಯ ಸಾಧಿಸಬಹುದು.
* ಯಾವುದು ಮುಖ್ಯ ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ತಯಾರಿ ನಡೆಸಿದಲ್ಲಿ ಅದರ ಫಲಿತಾಂಶ ಯಾವತ್ತಿಗೂ ಉತ್ತಮವಾಗಿ ಇರುತ್ತದೆ
* ನಾಗರೀಕ ಪರೀಕ್ಷೆಗೆ ಸಜ್ಜಾಗುವ ಅಭ್ಯರ್ಥಿಗಳಿಗೆ ಸಮಯ ಪಾಲನೆ ತುಂಬಾನೇ ಮುಖ್ಯ
* ಎಲ್ಲವನ್ನು ಓದಬೇಕು ಎಂದು ಭಾವಿಸಬೇಡಿ. ಇರುವ ಸಮಯದಲ್ಲಿ ಅಗತ್ಯವಾದ ಅಂಶಗಳಿಗೆ ಪ್ರಾಧಾನ್ಯತೆ ನೀಡಬೇಕು
IAS ಆಗುವ ಆಸೆಯಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ್ದ ಶೃತಿ ಶರ್ಮಾ..
ಶೃತಿ ಶರ್ಮಾ.. ದೆಹಲಿಯ ಸೈನ್ಟ್ ಸ್ಟೀಫನ್ಸ್ ಕಾಲೇಜ್ ನಲ್ಲಿ ಹಿಸ್ಟರಿ ಹಾನರ್ಸ್ ಪದವಿ ಪೂರ್ಣಗೊಳಿಸಿದರು. ನಂತರ JNU ನಲ್ಲಿ ಆಧುನಿಕ ಚರಿತ್ರೆಯ ಮಾಸ್ಟರ್ ಡಿಗ್ರಿ ಆಯ್ಕೆ ಮಾಡಿಕೊಂಡಿದ್ದರು. ಆದರೆ UPSC ಗೆ ಸಜ್ಜಾಗಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಸಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ ಸೇರುವ ಸಲುವಾಗಿ JNU ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು.