ಒಂದು ದಿನದೊಳಗೆ ರಿಯಲ್‌ ಸ್ಟಾರ್‌ ಉಪೇಂದ್ರಗೆ ಏನಾಯ್ತು..?

ಹೈದ್ರಾಬಾದ್‌ನಲ್ಲಿ ಘಟಿಸಿದ್ದ ಪಶುವೈದ್ಯೆಯ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಟ್ಟು ಕೊಂದ ಬಗ್ಗೆ ರಿಯಲ್‌ ಸ್ಟಾರ್‌ ಉಪೇಂದ್ರ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಅಭಿಪ್ರಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಯೂ ವ್ಯಕ್ತವಾಗಿದೆ.

ಎನ್‌ಕೌಂಟರ್‌ ನಡೆದಿದ್ದ ಸಂಜೆ ಈ ಪೋಸ್ಟ್‌ ಹಾಕಿದ್ದ ಬುದ್ಧಿವಂತ ಮಾರನೇ ದಿನ ಇನ್ನೊಂದು ಟ್ವೀಟ್‌ನ್ನೂ ಮಾಡಿದ್ದಾರೆ. ವಿಚಿತ್ರ ಎಂದರೆ ಆ ಟ್ವೀಟ್‌ನಲ್ಲಿ ವರಸೆಯನ್ನೇ ಬದಲಾಯಿಸಿದ್ದಾರೆ.

ಈ ಟ್ವೀಟ್‌ ಮೂಲಕ ಅತ್ಯಾಚಾರದ ಪಿಡುಗು ನಿರ್ಮೂಲನೆಗೆ ಎನ್‌ಕೌಂಟರ್‌ ಅಸ್ತ್ರ ಆಗಲಿದೆ ಎಂಬ ವಾದಕ್ಕೆ ಜೈ ಎಂದಿದ್ದಾರೆ ಬುದ್ಧಿವಂತ. ಮೊದಲ ಟ್ವೀಟ್‌ನಲ್ಲಿ ಪೊಲೀಸರೇ ಯಾರದ್ದೋ ಆಮಿಷಕ್ಕೊಳಗಾಗಿ ಎನ್‌ಕೌಂಟರ್‌ ನಡೆಸಿರಬಹುದು ಮತ್ತು ಆಪಾದಿತರೇ ಪಶುವೈದ್ಯೆಯ ಅತ್ಯಾಚಾರ ನಡೆಸಿ ಸುಟ್ಟುಹಾಕಿದ್ದರು ಎನ್ನುವುದಕ್ಕೆ ಏನು ಸಾಕ್ಯವಿದೆ ಎಂಬ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದ ಉಪೇಂದ್ರ ಟೀಕೆಗಳಿಗೆ ಹೆದರಿದರೇ..?

LEAVE A REPLY

Please enter your comment!
Please enter your name here