ಅತ್ಯಾಚಾರ ಪ್ರಕರಣ ದಾಖಲಿಸಲು ಬಂದ 13 ರ ಬಾಲಕಿ ಮೇಲೆ ಪೊಲೀಸ್ ಠಾಣೆಯ ಅಧಿಕಾರಿಯೇ ಮತ್ತೆ ರೇಪ್ ಮಾಡಿರುವ ದಾರುಣ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಲಿತ್ ಪುರ ಪೊಲೀಸ್ ಠಾಣೆ ಅಧಿಕಾರಿ ತಿಲಕ್ ಧಾರಿ ಸರೋಜ್ ಈ ದುಷ್ಕೃತ್ಯ ಎಸಗಿದ ಪಾಪಿ. 13 ವಯಸ್ಸಿನ ಬಾಲಕಿ ತನ್ನ ಮೇಲೆ 4 ಜನರಿಂದ ಅತ್ಯಾಚಾರ ಆಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ತನ್ನ ಸಂಬಂಧಿಯೊಂದಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಬಾಲಕಿ ಠಾಣೆಗೆ ದೂರು ನೀಡಲು ಬಂಧ ವೇಳೆ ಅಧಿಕಾರಿ ಎಲ್ಲಾ ಪೊಲೀಸರ ಕೆಲಸವನ್ನು ತೆಗದು ಹಾಕಿ ರಜೆ ನೀಡಿದ್ದ.
ಲಲಿತ್ ಪುರ ಸ್ಟೇಷನ್ ಪೊಲೀಸ್ ಅಧಿಕಾರಿ ತಿಲಕ್ ಧಾರಿ ಸರೋಜ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಹಾಗೂ ಪೋಕ್ಸೋ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಆರೋಪಿ ನಾಪತ್ತೆಯಾಗಿದ್ದು, ಈತನನ್ನು ಬಂಧಿಸಲು 3 ಪೊಲೀಸರ ತಂಡಗಳನ್ನು ರಚಿಸಲಾಗಿದೆ. ಉಳಿದ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಡಿಐಜಿ ಲೆವೆಲ್ ಅಧಿಕಾರಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಬಾಲಕಿಯ ತಂದೆ ಸೀನಿಯರ್ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದರು. ಬಾಲಕಿಯನ್ನು 4 ಜನರು ಹಪಹರಿಸಿ ನಿರಂತರವಾಗಿ 4 ದಿನಗಳ ಕಾಲ ರೇಪ್ ಮಾಡಿದ್ದರು. 4 ನೇ ದಿನ ಬಾಲಕಿಯನ್ನು ಗ್ರಾಮದ ಹತ್ತಿರ ಬಿಟ್ಟ ಪರಾರಿಯಾಗಿದ್ದರು.
ಪೊಲೀಸ್ ಆರೋಪಿಯನ್ನು ಬಂಧಿಸಲು ಪೊಲೀಸರ ತಂಡಗಳನ್ನು ರಚನೆ ಮಾಡಲಾಗಿದೆ. ಬಾಲಕಿಗೆ ರಕ್ಷಣೆ ನೀಡಲಾಗಿದೆ ಎಂದು ಲಲಿತ್ ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.