30 ವರ್ಷವಾದರೂ ಆಗದ ಮದುವೆ – ಮಂಡ್ಯ ಜಿಲ್ಲೆಯಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆ

30 ವರ್ಷವಾದರೂ ಮದುವೆ ಆಗಿಲ್ಲ ಎಂಬ ಕೊರಗು. ಇತ್ತ ಮಂಡ್ಯ ಜಿಲ್ಲೆಯ ಕೆ ಎಂ ದೊಡ್ಡಿಯ ಅವಿವಾಹಿತ ಯುವಕರು ಪಾದಯಾತ್ರೆ ಹೊರಟ್ಟಿದ್ದಾರೆ.

ಕೆ ಎಂ ದೊಡ್ಡಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ 122 ಕಿಲೋ ಮೀಟರ್​ ಪಾದಯಾತ್ರೆ ಆಯೋಜಿಸಿದ್ದಾರೆ. ಅಂದಹಾಗೆ ಈ ಪಾದಯಾತ್ರೆಯಲ್ಲಿ ಬ್ರಹ್ಮಚಾರಿಗಳಿಗಷ್ಟೇ ಅವಕಾಶ.

ಮಳವಳ್ಳಿ-ಕೊಳ್ಳೇಗಾಲ-ಹನೂರು ಮಾರ್ಗವಾಗಿ ಪಾದಯಾತ್ರೆ ಸಾಗಲಿದೆ.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ಮದುವೆ ಆದವರು ಭಾಗವಹಿಸುವಂತಿಲ್ಲ. ಈಗಾಗಲೇ ನಿಶ್ವಿತಾರ್ಥ ಆಗಿ ಮದುವೆ ನಿಗದಿ ಆದವರೂ ಕೂಡಾ ಈ ಪಾದಯಾತ್ರೆಯಲ್ಲಿ ಬರುವಂತಿಲ್ಲ.

ಪಾದಯಾತ್ರೆಯ ವೇಳೆ ಪ್ರತಿ ಐದು ಕಿಲೋ ಮೀಟರ್​ ಟೀ-ಕಾಫಿ ವ್ಯವಸ್ಥೆ ಮಾಡಲಾಗುತ್ತದೆ ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here