ಕನ್ಯೆಭಾಗ್ಯ ಕಲ್ಪಿಸಿ.. ಸಿದ್ದರಾಮಯ್ಯ ಸರ್ಕಾರಕ್ಕೆ ಹೀಗೊಂದು ಮನವಿ

ರಾಜ್ಯ ಸರ್ಕಾರ ಅನ್ನಭಾಗ್ಯ ಸೇರಿ ವಿವಿಧ ಭ್ಯಾಗ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೇ ಹೊತ್ತಲ್ಲಿ ಕನ್ಯೆಭಾಗ್ಯದ ಅದೃಷ್ಟವನ್ನು ಕಲ್ಪಿಸಿಕೊಡಿ ಎಂದು ಮದುವೆಯಾಗದ ಯುವಕನೊಬ್ಬ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ದಂಬಳ ಗ್ರಾಮದ 28 ವರ್ಷದ ಯುವಕ ಎಸ್.ಎನ್ ಹೂಗಾರ್(ಮುತ್ತು), ಮದುವೆಯಾಗಲು ನನಗೆ ಕನ್ಯೆಯನ್ನು ಹುಡುಕಿಕೊಡಿ ಎಂದು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ನೀಡಿದ್ದಾರೆ.

ನಮ್ಮ ಅಪ್ಪಅಮ್ಮನಿಗೆ ನಾನು ಒಬ್ಬನೆ ಮಗ. ನಾನು ಓರ್ವ ಗುತ್ತಿಗೆದಾರನಾಗಿದ್ದು, ತಿಂಗಳಿಗೆ ಕನಿಷ್ಠ 50ಸಾವಿರ ರೂಪಾಯಿ ಸಂಪಾದನೆ ಇದೆ. ಎಷ್ಟೋ ಕಡೆ ಹುಡುಕಿದರೂ ನನಗೆ ವಧು ಸಿಗುತ್ತಿಲ್ಲ. ಸರ್ಕಾರಿ ಉದ್ಯೋಗಿ ಆದಲ್ಲಿ ಮಾತ್ರ ಹುಡುಗಿಯನ್ನು ತೋರಿಸುತ್ತೇವೆ ಎಂದು ಏಜೆಂಟ್​ಗಳು ಹೇಳುತ್ತಾರೆ.

ನನಗೆ ಜಾತಿ ಜೊತೆ ಸಂಬಂಧವಿಲ್ಲ. ಜೀವನ ನಡೆಸಲು ಮದುವೆ ಆಗಬೇಕು ಎಂದುಕೊಂಡಿದ್ದೇನೆ. ನನಗೆ ಕನ್ಯೆಭಾಗ್ಯ ಕಲ್ಪಿಸಿಕೊಡಿ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪತ್ರವೀಗ ವೈರಲ್ ಆಗಿದೆ.