ಸಂಘರ್ಷದ ಬಳಿಕ ಸುಪ್ರೀಂಕೋರ್ಟ್​ಗೆ ಹೊಸದಾಗಿ ಐವರು ನ್ಯಾಯಮೂರ್ತಿಗಳ ನೇಮಕ

ಸುಪ್ರೀಂಕೋರ್ಟ್​ ಜೊತೆಗಿನ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​​ ಶಿಫಾರಸ್ಸು ಮಾಡಿದ್ದ ಐವರು ನ್ಯಾಯಮೂರ್ತಿಗಳ ನೇಮಕಾತಿಯನ್ನು ಅಂಗೀಕರಿಸಿದೆ.
ಈ ಮೂಲಕ ಸುಪ್ರೀಂಕೋರ್ಟ್​​ಗೆ ಐವರು ಹೊಸ ನ್ಯಾಯಮೂರ್ತಿಗಳು ನೇಮಕವಾಗಿದ್ದಾರೆ. ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳ ಹಾಲಿ ಸಾಮರ್ಥ್ಯ ಈ ಮೂಲಕ 32ಕ್ಕೆ ಏರಿಕೆ ಆಗಿದೆ. ಸುಪ್ರೀಂಕೋರ್ಟ್​ನ ಪೂರ್ಣ ಸಾಮರ್ಥ್ಯ 34 ನ್ಯಾಯಮೂರ್ತಿಗಳು.
ಸುಪ್ರೀಂಕೋರ್ಟ್​​ಗೆ ಹೊಸದಾಗಿ ನೇಮಕಗೊಂಡ ನ್ಯಾಯಮೂರ್ತಿಗಳು ಇವರು:
ನ್ಯಾಯಮೂರ್ತಿ ಪಂಕಜ್​ ಮಿತ್ತಲ್​ – ರಾಜಸ್ಥಾನ ಹೈಕೋರ್ಟ್​​ ಮುಖ್ಯ ನ್ಯಾಯಮೂರ್ತಿ
ನ್ಯಾಯಮೂರ್ತಿ ಸಂಜಯ್​ ಕರೋಲ್​ – ಪಾಟ್ನಾ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ
ನ್ಯಾಯಮೂರ್ತಿ ಪಿ ವಿ ಸಂಜಯ್​ ಕುಮಾರ್​ -ಮಣಿಪುರ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ
ನ್ಯಾಯಮೂರ್ತಿ ಅಸಾದುದ್ದೀನ್​ ಅಮಾನುಲ್ಲಾ – ಪಾಟ್ನಾ ಹೈಕೋರ್ಟ್​ ನ್ಯಾಯಮೂರ್ತಿ
ನ್ಯಾಯಮೂರ್ತಿ ಮನೋಜ್​ ಮಿಶ್ರಾ – ಅಲಹಾಬಾದ್​ ಹೈಕೋರ್ಟ್​ ನ್ಯಾಯಮೂರ್ತಿ

LEAVE A REPLY

Please enter your comment!
Please enter your name here