ಅಂತರಾಷ್ಟ್ರೀಯ ಮಟ್ಟದ ಪಾಕಿಸ್ತಾನದ ಖ್ಯಾತ ಅಂಪೈರ್ ಅಸಾದ್ ರೌತ್ ಅವರು, ಇದೀಗ ಪಾಕಿಸ್ತಾನದಲ್ಲಿ ಬಟ್ಟೆ ಅಂಗಡಿ ಹಾಗೂ ಶೂ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದಾರೆ.
ಮಾಜಿ ಅಂಪೈರ್ ಅಸಾದ್ ರೌತ್ ಅವರನ್ನು ಬಿಸಿಸಿಐ 2016 ರಲ್ಲಿ 5 ವರ್ಷದ ಅವಧಿಗೆ ಬ್ಯಾನ್ ಮಾಡಿದೆ. ಐಪಿಎಲ್ ಸೀಸನ್ನ ಪಂದ್ಯಗಳಲ್ಲಿನ ಭ್ರಷ್ಟಾಚಾರದ ಕಾರಣ ನೀಡಿ ಅಸಾದ್ ರಾವುತ್ ಅವರನ್ನು ‘ಅಂತರಾಷ್ಟ್ರೀಯ ಕ್ರಿಕೆಟ್ನ ಯಾವುದೇ ಪಂದ್ಯಗಳಲ್ಲಿ ಅಂಪೈರ್ ಆಗುವುದಾಗಲಿ, ಆಟದಲ್ಲಿ ಭಾಗವಹಿಸುವುದಾಗಲಿ ಅಥವಾ ಮಂಡಳಿಗಳಲ್ಲಿ ಸದಸ್ಯನಾಗುವುದನ್ನು ನಿರ್ಬಂಧಿಸಲಾಗಿದೆ’ ಎಂದು ಬಿಸಿಸಿಐ ತನ್ನ 2016 ರ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.
ಅಸಾದ್ ರೌತ್ ಅವರು 2013 ರ “ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ”ದಲ್ಲಿ ಭಾಗಿಯಾಗಿ ಬುಕಿಗಳಿಂದ ಉಡುಗೊರೆ ಸ್ವೀಕರಿಸಿದ್ದಾರೆ ಎಂಬ ಕಾರಣದಿಂದ ಇವರನ್ನು ಬಿಸಿಸಿಐ ನಿಷೇಧ ಮಾಡಿತ್ತು.
ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಅವರು, ನನಗೆ ಕ್ರಿಕೆಟ್ ಬಗೆಗೆ ಆಸಕ್ತಿ ಉಳಿದಿಲ್ಲ. ಬಟ್ಟೆ ಅಂಗಡಿ ಮತ್ತು ಶೂ ಅಂಗಡಿಗಳನ್ನು ನನ್ನ ಸಿಬ್ಬಂದಿಗಳಿಗಾಗಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
170 ಅಂತರಾಷ್ಟ್ರೀಯ ಪ್ರಿಕೆಟ್ ಪಂದ್ಯಗಳಲ್ಲಿ ಅಸಾದ್ ರಾವತ್ ಅವರು ಅಂಪೈರ್ ಆಗಿದ್ದು, ಇದರಲ್ಲಿ 49 ಟೆಸ್ಟ್ ಪಂದ್ಯಗಳು, 98 ಏಕದಿನ ಪಂದ್ಯಗಳು ಮತ್ತು 23 ಟಿ-20 ಪಂದ್ಯಗಳಿಗೆ ಅಂಪೈರ್ ಆಗಿ ಕೆಲಸ ನಿರ್ವಹಿಸಿದ್ದಾರೆ.
2013 ರಿಂದ ನಾವು ಕ್ರಿಕೆಟ್ ಜಗತ್ತಿನೊಂದಿಗೆ ಸಂಪರ್ಕದಲ್ಲಿಲ್ಲ. ಒಂದು ಬಾರಿ ನಾನು ಯಾವುದನ್ನಾದರು ಬಿಟ್ಟರೆ ಅದನ್ನು ಶಾಸ್ವತವಾಗಿ ಬಿಡುತ್ತೇನೆ ಎಂದು ಪಾಕಿಸ್ತಾನದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.