ಬಾಯಿ ಮತ್ತು ಹೃದಯಕ್ಕೆ ಫಿಲ್ಟರ್​ ಇಲ್ಲದೇ ನೇರವಾಗಿ ಹೇಳುತ್ತಿದ್ದ ಸಚಿವ ಕತ್ತಿ – ಪ್ರಮುಖರಿಂದ ಸಂತಾಪ

Minister Umesh Katti
Minister Umesh Katti
61 ವರ್ಷದ ಸಚಿವ ಮತ್ತು ಹುಕ್ಕೇರಿ ಕ್ಷೇತ್ರದ ಶಾಸಕರೂ ಆಗಿರುವ ಉಮೇಶ್​ ಕತ್ತಿ ಅವರ ನಿಧನ ಆಘಾತ ಉಂಟು ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹೋದ್ಯೋಗಿ ನಿಧನಕ್ಕೆ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.

ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸಂಸದ ಪ್ರತಾಪ್​ ಸಿಂಹ ಸಂತಾಪ:

ಬಾಯಿ ಮತ್ತು ಹೃದಯದ ಮಧ್ಯೆ ಫಿಲ್ಟರ್ ಇಲ್ಲದೆ, ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ನೇರನುಡಿಯ ನಾಯಕ, ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾವಪೂರ್ಣ ಶ್ರದ್ಧಾಂಜಲಿ.

ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸಂತಾಪ:
ಮಾನ್ಯ ಅರಣ್ಯ ಸಚಿವರು ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ಮರಣದ ವಿಚಾರ ತಿಳಿದು ಆಘಾತವಾಗಿದೆ. ನೇರ ವ್ಯಕ್ತಿತ್ವದ, ಸ್ನೇಹಜೀವಿಯಾಗಿದ್ದ ಕತ್ತಿಯವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ. ದೇವರು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. ಸದ್ಗತಿ 🙏

LEAVE A REPLY

Please enter your comment!
Please enter your name here