BREAKING: ನಾಳೆ ಜನೋತ್ಸವ ಹಿನ್ನೆಲೆ: ಸಂಪುಟ ಸಹೋದ್ಯೋಗಿಯ ನಿಧನಕ್ಕೆ ಒಂದು ದಿನವಷ್ಟೇ ಶೋಕಾಚಾರಣೆ

ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ (Minister Umesh Katti) ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇವತ್ತು ಒಂದು ದಿನ ರಾಜ್ಯಾದ್ಯಂತ ಶೋಕಾಚಾರಣೆ ಘೋಷಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮೊದಲ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾಳೆ ದೊಡ್ಡಬಳ್ಳಾಪುರದಲ್ಲಿ (Doddaballapura) ಬಿಜೆಪಿ ಸರ್ಕಾರ (BJP) ಜನೋತ್ಸವ ಸಮಾವೇಶ ಆಯೋಜಿಸಿದೆ.
ಜನೋತ್ಸವ ಹಿನ್ನೆಲೆಯಲ್ಲಿ ತಮ್ಮದೇ ಸಂಪುಟದ ಸಹೋದ್ಯೋಗಿ ನಿಧನರಾಗಿದ್ದರೂ ಮೂರು ದಿನದ ಬದಲು ಇವತ್ತು ಒಂದು ದಿನದ ಮಟ್ಟಿಗಷ್ಟೇ ಶೋಕಾಚರಣೆ ಘೋಷಿಸಿ ಬಿಜೆಪಿ ಸರ್ಕಾರ ಆದೇಶಿಸಿದೆ.
ಸಚಿವರು, ಗಣ್ಯರು ಅಗಲಿದೆ ವೇಳೆಯಲ್ಲಿ ಮೂರು ದಿನ ಶೋಕಾಚಾರಣೆ ಘೋಷಿಸಲಾಗುತ್ತದೆ. ಶೋಕಾಚರಣೆ ವೇಳೆ ಅಧಿಕೃತ ಸರ್ಕಾರಿ ಸಮಾರಂಭಗಳು ನಡೆಯಲ್ಲ.
ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್ ಎಸ್ ಮಹದೇವಪ್ರಸಾದ್, ಪ್ರಧಾನಿ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಅನಂತ್ ಕುಮಾರ್ ಅವರ ನಿಧನದ ವೇಳೆ ಮೂರು ದಿನ ಶೋಕಾಚಾರಣೆ ಘೋಷಿಸಲಾಗಿತ್ತು.
ಕತ್ತಿ ನಿಧನದ ಹಿನ್ನೆಲೆಯಲ್ಲಿ ಮೂರು ದಿನದ ಬದಲು ಒಂದೇ ದಿನ ಶೋಕಾಚಾರಣೆ ಘೋಷಿಸಿರುವ ಕಾರಣ ನಾಳೆ ನಿಗದಿಯಂತೆ ಬಿಜೆಪಿ ಸರ್ಕಾರದ ಅದ್ಧೂರಿ ಜನೋತ್ಸವ ಕಾರ್ಯಕ್ರಮ ನೆರೆವೇರಲಿದೆ.
ಶೋಕಾಚರಣೆ ಘೋಷಣೆ ಆದ ದಿನ ಸರ್ಕಾರದ ಕಟ್ಟಡಗಳಲ್ಲಿ ರಾಷ್ಟ್ರಧ್ವಜ (National Flag) ಅರ್ಧ ಮಟ್ಟದಲ್ಲಿ ಹಾರಲಿದೆ.
ಬೆಳಗಾವಿ (Belagavi) ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ:
ಸಚಿವ ಉಮೇಶ್ ಕತ್ತಿ ಅವರ ನಿಧನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here