BIG BREAKING: ಸಚಿವ ಕತ್ತಿ ನಿಧನದ ಆಘಾತ – ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ ಸಾಧ್ಯತೆ

ಆಹಾರ ಮತ್ತು ಅರಣ್ಯ ಸಚಿವ ಉಮೇಶ್​ ಕತ್ತಿ ನಿಧನದಿಂದ ರಾಜ್ಯದ ಜನತೆ ಆಘಾತಕ್ಕೊಳಗಾಗಿದ್ದಾರೆ.
ಈ ನಡುವೆ ಸೆಪ್ಟೆಂಬರ್​ 8ರಂದು ದೊಡ್ಡಬಳ್ಳಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.
ಉಮೇಶ್​ ಕತ್ತಿ ಆಡಳಿತ ಪಕ್ಷದ ಶಾಸಕರೂ ಮಾತ್ರವಲ್ಲದೇ ಹಾಲಿ ಸಚಿವರಾಗಿದ್ದವರು.
ಹೀಗಾಗಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾರಚಣೆ ಘೋಷಿಸಲಿದೆ.
ಶೋಕಾಚಾರಣೆ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
ತಮ್ಮದೇ ಸಂಪುಟದ ಸಹೋದ್ಯೋಗಿ ಅಗಲಿಕೆಯ ಆಘಾತದಲ್ಲಿರುವ ಬಿಜೆಪಿ ಸರ್ಕಾರ ಜನೋತ್ಸವ ಕಾರ್ಯಕ್ರಮ ಮುಂದೂಡುವ ನಿರೀಕ್ಷೆ ಇದೆ.
ಈ ಹಿಂದೆ ಪ್ರವೀಣ್​ ನೆಟ್ಟಾರು ಅವರ ಕೊಲೆಯ ಬಳಿಕ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮವನ್ನು ದೆಹಲಿ ಬಿಜೆಪಿ ನಾಯಕರ ಸೂಚನೆ ಮೇರೆಗೆ ಮುಂದೂಡಲಾಗಿತ್ತು.

LEAVE A REPLY

Please enter your comment!
Please enter your name here