ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಸಂಬAಧ ಜೆಎನ್ಯು ವಿದ್ಯಾರ್ಥಿ ಸಂಘಟನೆ ನಾಯಕರಾಗಿದ್ದ ಉಮರ್ ಖಾಲಿದ್ಗೆ ದೆಹಲಿ ಕೋರ್ಟ್ ಜಾಮೀನು ನಿರಾಕರಿಸಿದೆ.
ಸೆಪ್ಟೆಂಬರ್ 13, 2020ರಿಂದ ಉಮರ್ ಖಾಲಿದ್ ಜೈಲಿನಲ್ಲಿದ್ದಾರೆ.
ದೆಹಲಿ ಹಿಂಸಾಚಾರ ಸಂಬAಧ ಖಾಲಿದ್ ವಿರುದ್ಧ ಉಗ್ರಗಾಮಿ ಚಟುವಟಿಕೆ ನಿರ್ಬಂಧಿಸುವ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
`ಸಿಎಎ ವಿರುದ್ಧ ಉಮರ್ ಖಾಲಿದ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಜ್ಯಾತ್ಯಾತೀತವಾಗಿತ್ತು ಮತ್ತು ಪೊಲೀಸರ ಕೋಮು ಭಾವನೆಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ. 2020ರ ಫೆಬ್ರವರಿ 17ರಂದು ಮಹಾರಾಷ್ಟçದ ಅಮರಾವತಿಯಲ್ಲಿ ಖಾಲಿದ್ ಮಾಡಿದ್ದ ಭಾಷಣವನ್ನು ರಿಪಬ್ಲಿಕ್ ಟಿವಿ ಮತ್ತು ನ್ಯೂಸ್ 18 ತಿರುಚಿತ್ತು. ಪೊಲೀಸರು ತಮ್ಮ ಆರೋಪಕ್ಕೆ ರಿಪಬ್ಲಿಕ್ ಟಿವಿ ಮತ್ತು ನ್ಯೂಸ್ 18ನ್ನು ಬಿಟ್ಟರೇ ಏನನ್ನೂ ಹೊಂದಿಲ್ಲ’ ಎಂದು ಉಮರ್ ಖಾಲಿದ್ ಪರ ವಕೀಲರು ವಾದಿಸಿದ್ದರು.