BREAKING: ಉಕ್ರೇನ್​ನಿಂದ ವಾಪಸ್ಸಾದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಓದಲು ಅವಕಾಶ ಕೊಡಲು ಸಾಧ್ಯವಿಲ್ಲ – ಕೇಂದ್ರ ಸರ್ಕಾರದ ಹೇಳಿಕೆ

ಉಕ್ರೇನ್​ನಲ್ಲಿ (Ukraine) ವೈದ್ಯಕೀಯ ಶಿಕ್ಷಣಕ್ಕೆ (Medical Education) ತೆರಳಿದ್ದ ವಿದ್ಯಾರ್ಥಿಗಳಿಗೆ ಭಾರತದ ವೈದ್ಯಕೀಯ ವಿವಿಗಳಲ್ಲಿ (Medical VV) ಅಧ್ಯಯನಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​​ (Supreme Court) ಎದುರು ಹೇಳಿಕೆ ನೀಡಿದೆ.
ಉಕ್ರೇನ್​ನಿಂದ ಭಾರತಕ್ಕೆ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದ ವಿವಿಗಳಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ. ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆಯ ಪ್ರಕಾರ ಅಂತಹ ಅವಕಾಶಗಳಿಲ್ಲ. ಅಲ್ಲದೇ ಭಾರತದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಅಂತಹ ಸಡಿಲಿಕೆಯನ್ನು ಮಾಡುವುದು ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟಕ್ಕೆ ತೊಡಕಗಾಲಿದೆ.
ಎರಡು ಕಾರಣಗಳಿಗಾಗಿ ಈ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ: 1) ನೀಟ್​ ಪರೀಕ್ಷೆಯಲ್ಲಿ ಮೆರಿಟ್​ ಇಲ್ಲದೇ ಇರುವುದು ಮತ್ತು ಕಡಿಮೆ ವೆಚ್ಚದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ. ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟರೆ ಇತರೆ ದಾವೆ(ವ್ಯಾಜ್ಯಗಳಿಗೆ) ಕಾರಣ ಆಗುತ್ತದ ಮತ್ತು ಆ ವಿದ್ಯಾರ್ಥಿಗಳು ಅಷ್ಟು ಶುಲ್ಕವನ್ನು ಭರಿಸಲು ಶಕ್ತರಾಗಿಲ್ಲ
ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಪ್ರಮಾಣಪತ್ರ ಸಲ್ಲಿಸಿದೆ.
ಭಾರತದ ವೈದಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ನೀಡುವಂತೆ ಕೋರಿ ಉಕ್ರೇನ್​ನಿಂದ ಮರಳಿದ್ದ ಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಹೇಮಂತ್​ ಗುಪ್ತಾ ಮತ್ತು ಸುಧಾನ್ಶು ಧುಲಿಯಾ ಅವರ ಪೀಠದಲ್ಲಿ ನಡೆಯುತ್ತಿದೆ. ಮುಂದಿನ ವಿಚಾರಣೆ ನಾಳೆ ನಡೆಯಲಿದೆ.
ಉಕ್ರೇನ್​ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮುಂದುವರೆಸಲು ಅವಕಾಶ ನೀಡುವಂತೆ ಆಗಸ್ಟ್​ 3ರಂದು ವಿದೇಶಾಂಗ ವ್ಯವಹಾರ ಮೇಲಿನ ಸಂಸದೀಯ ಸಮಿತಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸು ಆಧರಿಸಿ ಉಕ್ರೇನ್​ನಿಂದ ವಾಪಸ್ಸಾದ ವಿದ್ಯಾರ್ಥಿಗಳು ದಾವೆ ಹೂಡಿದ್ದಾರೆ.

LEAVE A REPLY

Please enter your comment!
Please enter your name here