BREAKING: ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ – ಮಾಜಿ ಸಚಿವ ಈಶ್ವರಪ್ಪಗೆ ಪೊಲೀಸರ ಕ್ಲೀನ್​ಚಿಟ್​

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಅವರಿಗೆ ಪೊಲೀಸರು ಕ್ಲೀನ್​ಚಿಟ್​ ನೀಡಿದ್ದಾರೆ.

ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡಿದ್ದರು ಮತ್ತು ನನಗೆ ಕ್ಲೀನ್​ಚಿಟ್​ ಸಿಗುತ್ತದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ಸ್ವತಃ ಈಶ್ವರಪ್ಪನವರೇ ಹೇಳಿದ್ದರು.

ಮಾಜಿ ಸಚಿವ ಈಶ್ವರಪ್ಪ ಅಥವಾ ಈಶ್ವರಪ್ಪ ಆಪ್ತರ ಜೊತೆಗೆ ಸಂತೋಷ್​ ಪಾಟೀಲ್​ಗೆ ಸಂಪರ್ಕ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಈಶ್ವರಪ್ಪ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಉಡುಪಿ ಪೊಲೀಸರು ಅಂತಿಮ ವರದಿಯಲ್ಲಿ ತಿಳಿಸಿದ್ದಾರೆ.

ಆದರೆ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ.

ಇತ್ತೀಚೆಗಷ್ಟೇ ಸಂತೋಷ್​ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ಪೊಲೀಸರ ತನಿಖೆಗೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here