ಉಡುಪಿ (Udupi) ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಕೈ ಅಕ್ಷಯ್ ಮಚಿಂದ್ರ (Hakay Akshay Machindra) ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಡುಪಿ ಎಸ್ಪಿ ಆಗಿದ್ದ ಎನ್ ವಿಷ್ಣುವರ್ಧನ್ (N Vishuvardhan) ಅವರನ್ನು ಬೆಂಗಳೂರು ಗುಪ್ತಚರದಳದ (Intelligence) ಎಸ್ಪಿ ಆಗಿ ವರ್ಗಾಯಿಸಲಾಗಿದೆ.
2014ರಲ್ಲಿ ಹಕೈ ಅಕ್ಷಯ್ ಅವರು ಯುಪಿಎಸ್ಸಿ ಪರೀಕ್ಷೆ ಪಾಸ್ ಆಗಿ 2015ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆ ಆಗಿದ್ದರು.
ಈ ಹಿಂದೆ 2020ರ ಜನವರಿಯಲ್ಲೂ ಹಕೈ ಅವರನ್ನು ಉಡುಪಿ ಎಸ್ಪಿ ಆಗಿ ಸರ್ಕಾರ ನೇಮಿಸಿತ್ತಾದರೂ ಅವತ್ತೇ ತನ್ನ ನಿರ್ಧಾರವನ್ನು ಬದಲಿಸಿದ್ದ ಸರ್ಕಾರ ಎನ್ ವಿಷ್ಣುವರ್ಧನ್ ಅವರನ್ನು ನೇಮಕ ಮಾಡಿತ್ತು.