ಹುಟ್ಟುಹಬ್ಬದಂದೇ ಈಜುಕೊಳಕ್ಕೆ ಬಿದ್ದು 2 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ನೆದಿದೆ.
ಮಹಾರಾಷ್ಟ್ರದ ಲೋನವಾಲಾದಲ್ಲಿ ಪೋಷಕರು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಸೇರಿದ್ದರು. ಈ ವೇಳೆ ಬಾಲಕ ಆಟವಾಡುತ್ತಾ ಬಂಗಲೆಯಲ್ಲಿರುವ ಈಜುಕೊಳಕ್ಕೆ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಜುಲೈ 13 ರಂದು ಈ ಘಟನೆ ನಡೆದಿದೆ. ನಾಸಿಕ್ ಮೂಲಕ ಪೋಷಕರು ತಮ್ಮ ಮಗುವಿನ 2 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ನಿರ್ಧರಿಸಿದ್ದರು.
ಬಾಲಕ ಈಜುಕೊಳಕ್ಕೆ ಬಿದ್ದಾಗ, ಪೋಷಕರು ಮತ್ತು ಇತರೆ ಕುಟುಂಬಸ್ಥರು ಬಂಗಲೆಯ ಮೊದಲ ಪ್ಲೋರ್ನಲ್ಲಿ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.