ಇಬ್ಬರು MLCಗಳಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ

ವಿಧಾನಪರಿಷತ್​ ಸದಸ್ಯರಾದ ಗೋವಿಂದರಾಜು ಮತ್ತು ನಜೀರ್​ ಅಹ್ಮದ್​ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.
ಇಬ್ಬರಿಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಕಾಂಗ್ರೆಸ್​ ಚುನಾವಣಾ ತಜ್ಞರಾಗಿದ್ದ ಸುನಿಲ್​ ಕನುಗೋಲು ಅವರಿಗೂ ಸರ್ಕಾರ ಮುಖ್ಯಮಂತ್ರಿಗಳ ಸಲಹೆಗಾರರ ಹುದ್ದೆಯನ್ನು ನೀಡಿದೆ.