ದೊಡ್ಮನೆಗೆ ಎಂಟ್ರಿಕೊಟ್ಟ ಆ ಇಬ್ಬರು ನಟಿಮಣಿಯರು ಯಾರು ಗೊತ್ತಾ?

ಬೆಂಗಳೂರು: ಬಿಗ್​​​​ ಬಾಸ್​​ ಮನೆಯಲ್ಲಿ  ವೈಲ್ಡ್​​​ ಕಾರ್ಡ್​ ಎಂಟ್ರಿ ಪರ್ವ ಪ್ರಾರಂಭವಾಗಿದ್ದು, ಚಂದ್ರಚೂಡರ ಬಳಿಕ ದೊಡ್ಮನೆಗೆ ಇಬ್ಬರು ನಟಿಮಣಿಯರು ಎಂಟ್ರಿ  ಕೊಟ್ಟಿದ್ದಾರೆ.

ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಅಲ್ಲಿ ಚಂದ್ರ ಚೂಡರ ಬದಲು ಮಂಜು ಪಾವಗಡ ಹೆಣ್ಣುಮಕ್ಕಳು ಬಂದ್ದಿದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿಕೆ ನೀಡಿದ ಬೆನ್ನಲೆ ಆ ಇಬ್ಬರು ನಟಿಯರು ಮನೆ ಪ್ರವೇಶಿಸಿದ್ದು, ಒಂದು ಲೆಕ್ಕದಲ್ಲಿ ಬಿಗ್ ಬಾಸ್ ಮಂಜು ಪಾವಗಡ ಬೇಡಿಕೆಯನ್ನು ಈಡೇರಿಸದಂತಾಗಿದೆ.

ಹೌದು ವೈದೇಹಿಯವರ ಕಾದಂಬರಿ ಆಧಾರಿತ ಅಮ್ಮಚಿ ಎಂಬ ನೆನಪು ಸಿನಿಮಾದಲ್ಲಿ ನಟಿಸಿದ್ದ ವೈಜಯಂತಿ ಅಡಿಗ ಎರಡನೇ ವೈಲ್ಡ್ ​​ಕಾರ್ಡ್​​​ ಎಂಟ್ರಿ ಪಡೆದರೆ, ಪ್ರೀತಿಯಿಂದ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ ಅವರದ್ದು 3ನೇ ಎಂಟ್ರಿಯಾಗಿದೆ.

ವೈಜಯಂತಿ ಅಡಿಗ ಅವರು ಬೆಂಗಳೂರಿನಲ್ಲಿ ಹಲವೆಡೆ ರೆಸ್ಟೋರೆಂಟ್​​​ಗಳನ್ನು ನಡೆಸುತ್ತಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಧಾರಾವಾಹಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಳೆದ ವಾರದ ಕಿಚ್ಚ ಸುದೀಪ್​ ಎಪಿಸೋಡ್​​​ನಲ್ಲಿ ಸುದೀಪ್ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಸೂಚನೆ ನೀಡಿದ್ದರು. ಅದರಂತೆ ಈ ವಾರವೇ ಇಬ್ಬರು ಮಹಿಳಾ ಅಭ್ಯರ್ಥಿಗಳು ಎಂಟ್ರಿ ನೀಡಿದ್ದಾರೆ. ಇನ್ನೂ ಈ ವಾರ ಎಂಟ್ರಿ ಪಡೆದಿರುವ ಈ ಅಭ್ಯರ್ಥಿಗಳ ಕುರಿತು ಬಿಗ್ ಬಾಸ್ ಸ್ಪರ್ಧಿಗಳನ್ನು ಸೇರಿದಂತೆ ವೀಕ್ಷಕರಿಗೂ ಕೂತುಹಲ ಕೆರಳಿದೆ.

LEAVE A REPLY

Please enter your comment!
Please enter your name here