ಹಾಲು ಆಳತೆಯಲ್ಲಿ ಆಗಿರುವ ಮೋಸವನ್ನು ಪತ್ತೆ ಹಚ್ಚಿದ ರೈತನ ಮೇಲೆ ಡೈರಿ ಕಾರ್ಯದರ್ಶಿ ಹಲ್ಲೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೆಡ್ಡಿಗೆರೆಯಲ್ಲಿ ನಡೆದಿದೆ.
ಹಾಲು ಪರೀಕ್ಷೆಗೆ 30 ಎಂಎಲ್ ಹಾಲು ಪಡೆಯುವ ಬದಲು ಹಾಲಿನ ಸಂಘದ ಕಾರ್ಯದರ್ಶಿ ಬೋರಮ್ಮ 180 ಎಂಎಲ್ ಹಾಲು ಪಡೆದಿದ್ದಾರೆ. ಹೆಚ್ಚುವರಿ ಹಾಲು ಪಡೆದಿದ್ದನ್ನು ಪ್ರಶ್ನಿಸಿದಾಗ 50 ಎಂಎಲ್ ಹಾಲಷ್ಟೇ ವಾದಿಸಿ ಕಾರ್ಯದರ್ಶಿ ಬೋರಮ್ಮ ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ.
ಪ್ರಶ್ನಿಸಿದ ರೈತನ ಕೊರಳಪಟ್ಟಿ ಹಿಡಿದು ಕಾರ್ಯದರ್ಶಿ ಬೋರಮ್ಮ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.