No Result
View All Result
ಹಿಂದೂಗಳ ಪ್ರಸಿದ್ಧ ಕ್ಷೇತ್ರ ತಿರುಪತಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೊಡ್ಡ ಆಘಾತವೊಂದನ್ನು ನೀಡಿದೆ.
ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಹುಂಡಿಗಳಲ್ಲಿ ವಿದೇಶಿ ಕರೆನ್ಸಿ ರೂಪದಲ್ಲಿ ಹಾಕಿರುವ ಕಾಣಿಕೆಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದಂತೆ ನಿರ್ಬಂಧ ಹೇರಿದೆ.
ಮೋದಿ ಸರ್ಕಾರದ ಈ ಕ್ರಮದಿಂದಾಗಿ ತಿಮ್ಮಪ್ಪನ ಹುಂಡಿಗೆ ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ 26 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಹಾಗೆ ಉಳಿದಿದೆ ಎಂದು ಇಂಗ್ಲೀಷ್ ದೈನಿಕ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮೂರು ವರ್ಷಗಳಿಂದ ಮೋದಿ ಸರ್ಕಾರ ವಿದೇಶಿ ದೇಣಿಗೆ ನಿಯಂತ್ರಣ ನಿಯಮ (FCRA) ಅಡಿಯಲ್ಲಿ ತಿರುಪತಿ ತಿಮ್ಮಪ್ಪ ದೇವಸ್ಥಾನಂ ಟ್ರಸ್ಟ್ (TTD)ಗೆ ನೀಡಲಾಗಿದ್ದ ಪರವಾನಿಗೆಯನ್ನು ಅಮಾನತಿನಲ್ಲಿಟ್ಟಿದೆ.
ಹೀಗಾಗಿ ಭಕ್ತರು ಹುಂಡಿಗೆ ಹಾಕುವ ವಿದೇಶಿ ಕರೆನ್ಸಿಯನ್ನೂ ಬ್ಯಾಂಕ್ಗೆ ಜಮೆ ಮಾಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ನಿರ್ಬಂಧ ಉಲ್ಲೇಖಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕಾಣಿಕೆಯನ್ನು ಜಮೆ ಮಾಡಿಕೊಳ್ಳಲು ನಿರಾಕರಿಸುತ್ತಿದೆ.
ಕಳೆದ ವರ್ಷದ ವರದಿ ಪ್ರಕಾರ ಹುಂಡಿಗಳ ಮೂಲಕವೇ ಟಿಟಿಡಿ 1,450 ಕೋಟಿ ರೂಪಾಯಿ ಕಾಣಿಕೆ ಬಂದಿತ್ತು.
ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ ಹುಂಡಿ ಕಾಣಿಕೆ:
ಅಮೆರಿಕನ್ ಡಾಲರ್ – 11.50 ಕೋಟಿ ರೂ.
ಮಲೇಷ್ಯಾ ರಿಗಿಂಟ್ – 5.93 ಕೋಟಿ ರೂ.
ಯುಎಇ ದಿರಮ್ – 1.75 ಕೊಟಿ ರೂ.
ಸಿಂಗಾಪುರ ಡಾಲರ್: 4.06 ಕೋಟಿ ರೂ.
ಇಂಗ್ಲೆಂಡ್ ಪೌಂಡ್ – 97 ಲಕ್ಷ ರೂ.
ಯುರೋಪಿಯನ್ ಯೂನಿಯನ್ ಯುರೋ: 97 ಲಕ್ಷ
ಆಸ್ಟ್ರೇಲಿಯಾ ಡಾಲರ್ – 74 ಲಕ್ಷ ರೂ.
ಕೆನಡಾ ಡಾಲರ್: 40 ಲಕ್ಷ ರೂ.
ಇತರೆ ವಿದೇಶಿ ಕರೆನ್ಸಿ: 80 ಲಕ್ಷ ರೂ.
ಜೊತೆಗೆ ತಪ್ಪಾದ ರೂಪದಲ್ಲಿ ಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯದ ಎಫ್ಸಿಆರ್ಎ ವಿಭಾಗ ಟಿಟಿಡಿಗೆ 3.19 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಜೊತೆಗೆ 2019ರಲ್ಲಿ ಎಫ್ಸಿಆರ್ಎ ಪರವಾನಿಗೆ ನವೀಕರಣ ಮಾಡದೇ ಇರುವುದನ್ನು ಮುಚ್ಚಿಟ್ಟ ಆರೋಪದಡಿ 1.14 ಕೋಟಿ ರೂಪಾಯಿ ದಂಡ ವಿಧಿಸಿತ್ತು.
No Result
View All Result
error: Content is protected !!