ಬಂಧನ ಕೇಂದ್ರಗಳು ಇವೆಯೋ..? ಇಲ್ಲವೋ? ಯಾವುದು ಸತ್ಯ.?

ಎನ್‍ಆರ್‍ಸಿ ಮತ್ತು ರಾಷ್ಟ್ರೀಯ ಪೌರತ್ವ ಕಾಯ್ದೆ ವಿರೋಧಿ ಹೋರಾಟಗಳು ದೇಶವ್ಯಾಪಿ ಮುಂದುವರೆದಿರುವಂತೆಯೇ ಕೇಂದ್ರ ಸರ್ಕಾರ ಕೆಲವೊಂದು ಸ್ಪಷ್ಟನೆ ಕೊಡಲು ಪ್ರಯತ್ನಿಸಿದೆ. ಮುಸ್ಲಿಮರಿಗೆ ಯಾವುದೇ ಆತಂಕ ಬೇಡ. ಕಾಂಗ್ರೆಸ್ ಮತ್ತು ನಗರ ನಕ್ಸಲರು ಸುಳ್ಳು ಹರಡಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದರು. ಜೊತೆಗೆ ಅಕ್ರಮ ವಲಸಿಗರಿಗೆ ಬಂಧನ ಕೇಂದ್ರಗಳನ್ನು ತೆರೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಗೂಗಲ್ ಸೆರ್ಚ್ ಮಾಡಿ ನೋಡಿ ನಿಮಗೆ ಸತ್ಯ ಏನು ಎಂದು ಗೊತ್ತಾಗುತ್ತದೆ. ಬಂಧನಕೇಂದ್ರಗಳು ದೇಶದಲ್ಲಿರುವುದು ಸತ್ಯ ಸತ್ಯ ಸತ್ಯ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ, 2019ರ ನವೆಂಬರ್ 27ರಂದು ಕೇಂದ್ರ ಸಚಿವ ನಿತ್ಯಾನಂದ್ ರೈ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮೂರು ಪತ್ರಿಕೆಗಳ ವರದಿಯನ್ನು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

ಅಸ್ಸಾಂಲ್ಲಿರುವ ಬಂಧನ ಕೇಂದ್ರಗಳಲ್ಲಿ 2016ರಿಂದ ಇದುವರೆಗೂ 28 ಮಂದಿ ಅಕ್ರಮ ವಲಸಿಗರು ಸಾವನ್ನಪ್ಪಿದ್ದಾರೆ. ಆದರೆ ಅವರ್ಯಾರು ಭಯ,ಕಿರುಕುಳದಿಂದ ಸಾವನ್ನಪ್ಪಿಲ್ಲ. ವಿವಿಧ ರೀತಿಯ ಅನಾರೋಗ್ಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸಂಸತ್‍ನ ಮೇಲ್ಮನೆಯಲ್ಲಿ ಹೇಳಿಕೆ ನೀಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ, ಸಿಎಎ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಕುರಿತಂತೆ ತನಿಖೆ ನಡೆಸಲು ಆಯೋಗ ರಚನೆ ಕುರಿತಾಗಿ ಪ್ರಸ್ತಾಪ ಆಗಲಿಲ್ಲ. ದೇಶದ 22 ವಿವಿಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಂತೆಯೂ ಪ್ರಸ್ತಾಪ ಮಾಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

LEAVE A REPLY

Please enter your comment!
Please enter your name here