BREAKING: TRP ಹಗರಣ – ರಿಪಬ್ಲಿಕ್​ ಟಿವಿಗೆ ಕ್ಲೀನ್​ಚಿಟ್​, India Today ವಿರುದ್ಧ ತನಿಖೆ ಬಾಕಿ

ಟಿಆರ್​ಪಿ (TRP) ಹಗರಣದಲ್ಲಿ ಇಂಗ್ಲೀಷ್​ ಸುದ್ದಿವಾಹಿನಿ ರಿಪಬ್ಲಿಕ್​ ಟಿವಿಗೆ (Republic TV) ಅಕ್ರಮ ಹಣ ವರ್ಗಾವಣೆ (Money Laundering) ಸಂಬಂಧ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ (ED) ಕ್ಲೀನ್​ಚಿಟ್ (Clean Chit)​ ನೀಡಿದೆ.
ಮುಂಬೈನ (Mumbai) ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ (Charegesheet) ಟಿಆರ್​ಪಿ ಅಕ್ರಮದಲ್ಲಿ ರಿಪಬ್ಲಿಕ್​ ಟಿವಿ ಮತ್ತು ರಿಪಬ್ಲಿಕ್​ ಭಾರತ್​ (Republic Bharat) ಭಾಗಿ ಆಗಿದೆ ಎನ್ನಲು ಯಾವುದೇ ಪುರಾವೆಗಳು (Evidence) ಸಿಕ್ಕಿಲ್ಲ ಎಂದು ಈಡಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟ ಸರ್ಕಾರ ಇದ್ದ ಅವಧಿಯಲ್ಲಿ ಮುಂಬೈನ ಪೊಲೀಸರು ಟಿಆರ್​ಪಿ ಹಗರಣ (TRP Scam)ವನ್ನು ಬಯಲಿಗೆಳೆದಿದ್ದರು.
ಅದರೆ ಉಳಿದೆರಡು ಟಿವಿ ನ್ಯೂಸ್​ ಚಾನೆಲ್​ಗಳಾದ ಇಂಡಿಯ ಟುಡೇ (India Today) ಮತ್ತು ನ್ಯೂಸ್​ ನೇಷನ್​ (News Nation) ವಿರುದ್ಧ ತನಿಖೆ ಮುಂದುವರಿದಿದೆ ಎಂದು ಈಡಿ (ED) ಆರೋಪಪಟ್ಟಿಯಲ್ಲಿ ಹೇಳಿದೆ.
ಸೆಪ್ಟೆಂಬರ್​ 15ರಂದು ಮುಂಬೈನಲ್ಲಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಕುರಿತ ವಿಶೇಷ ನ್ಯಾಯಾಲಯಕ್ಕೆ (PMLA Court) ಈಡಿ ಆರೋಪಪಟ್ಟಿ ಸಲ್ಲಿಸಿತ್ತು.
ಏನಿದು ಟಿಆರ್​ಪಿ ಹಗರಣ..?
– ನವೆಂಬರ್​, 2020ರಲ್ಲಿ ಟಿಆರ್​ಪಿ ಅಕ್ರಮದಲ್ಲಿ ಹಣ ವರ್ಗಾವಣೆ ಆಗಿದೆ ಎಂಬ ಆರೋಪದಡಿ ಎಫ್​ಐಆರ್​ ದಾಖಲಿಸಿಕೊಂಡಿದ್ದ ಈಡಿ.
– ಅಧಿಕ ಆದಾಯ ಗಳಿಸುವ ಸಲುವಾಗಿ ಟಿಆರ್​ಪಿಯನ್ನು ತಿರುಚಿತ್ತು ಮತ್ತು ಅದರಿಂದ ರಿಪಬ್ಲಿಕ್​ ಟಿವಿ ಲಾಭ ಪಡೆದಿತ್ತು ಎಂದು ನವೆಂಬರ್​, 2020ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದ ಮುಂಬೈ ಪೊಲೀಸರು
– ಆದರೆ ರಿಪಬ್ಲಿಕ್​ ಟಿವಿ ಆಗಲೀ ಅಥವಾ ರಿಪಬ್ಲಿಕ್​ ಭಾರತ್​ ಆಗಲೀ ಟಿಆರ್​ಪಿ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎನ್ನುವುದಕ್ಕೆ ಹೇಳಿಕೆಗಳು ಅಥವಾ ಡಿಜಿಟಲ್​ ಸಾಕ್ಷ್ಯಗಳು ಇಲ್ಲ ಎಂದಿರುವ ಈಡಿ.
– ಮುಂಬೈ ಪೊಲೀಸರು ನಡೆಸಿದ ದಾಳಿ ಮತ್ತು ತನಿಖೆ ಈಡಿ (ED) ನಡೆಸಿದ ತನಿಖೆಗೆ ಭಿನ್ನವಾಗಿದೆ ಎಂದಿರುವ ಈಡಿ.
– ಮುಂಬೈ ಪೊಲೀಸರು ಮೇಲ್ನೋಟಕ್ಕಷ್ಟೇ ಮತ್ತು ಕೆಲವು ಮಿತಿಗಳಷ್ಟೇ ಫೋರೆನ್ಸಿಕ್​ ಆಡಿಟ್ (Forensic Audit)​​ ಕೈಗೊಂಡಿದ್ದರು.
– ಮುಂಬೈ ಪೊಲೀಸರ ಆರೋಪಪಟ್ಟಿ ಪ್ರಕಾರ ಆರ್​ಎಂಎಸ್ (RMs)​ ಕಂಪನಿಯು ರಿಪಬ್ಲಿಕ್​ ಟಿವಿಯನ್ನು ನೋಡುವಂತೆ ಮನೆಗಳಲ್ಲಿನ ವೀಕ್ಷಕರಿಗೆ ಹಣ ಪಾವತಿಸಿತ್ತು. ಆದರೆ ಈಡಿ ಆರೋಪಪಟ್ಟಿ ಪ್ರಕಾರ ಇಂತಹ ಹಣ ವರ್ಗಾವಣೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
– ಆ ಮನೆಗಳಲ್ಲಿ ರಿಪಬ್ಲಿಕ್​ ಟಿವಿಯ ಜೊತೆಗೆ ಇತರೆ ಚಾನೆಲ್​​​ಗಳನ್ನೂ ನೋಡಲಾಗಿದೆ ಎಂದು ಬಾರ್ಕ್​​ ಡಾಟಾ ಆಧರಿಸಿ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿರುವ ಈಡಿ.

LEAVE A REPLY

Please enter your comment!
Please enter your name here