ಮುಂದಿನ ವರ್ಷ ಈ ನಟಿ ಫುಲ್‌ ಬ್ಯುಸಿಯಂತೆ..!

ಬಹುಭಾಷಾ ನಟಿ ತ್ರಿಶಾ ಸಿನಿಮಾ ರಂಗಕ್ಕೆ ಕಾಲಿಟ್ಟು ೧೭ ವರ್ಷಗಳಾಗಿವೆ. ೩೬ ವರ್ಷ ವಯಸ್ಸಿನ ತ್ರಿಶಾ ೨೦೨೦ರಲ್ಲಿ ಬ್ಯುಸಿ ಆಗಲಿದ್ದಾರೆ. ದಕ್ಷಿಣ ಭಾರತದ ದೊಡ್ಡ ದೊಡ್ಡ ನಟರು ಮತ್ತು ಖ್ಯಾತ ನಿರ್ದೇಶಕರ ಸಿನಿಮಾದಲ್ಲಿ ನಟಿಸಲಿದ್ದಾರೆ.

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಂದಹಾಗೆ ಇದು ಬಹು ತಾರಾಗಣದ ಚಿತ್ರ. ಐಶ್ವರ್ಯ ರೈ ಬಚ್ಚನ್‌, ವಿಕ್ರಮ್‌, ಕಾರ್ತಿ, ಜಯರಾಂ ರವಿ, ವಿಕ್ರಮ್‌ ಪ್ರಭು, ಜಯರಾಂ, ಪ್ರಭು, ಶರತ್‌ಕುಮಾರ್‌, ಕಿಶೋರ್‌, ಅಶ್ವಿನ್‌ ಕಕ್ಕಾಮನು, ಐಶ್ವರ್ಯ ಲಕ್ಷ್ಮೀ ಈ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲದೇ ಕೊರಟಾಲಾ ಶಿವ ನಿರ್ದೇಶದ ತೆಲುಗು ಸಿನಿಮಾದಲ್ಲಿ ಮೆಗಾ ಸ್ಟಾರ್‌ ಚಿರಂಜೀವಿ ಜೊತೆ ನಟಿಸಲಿದ್ದಾರೆ. ಜೊತೆಗೆ ಕಂಪ್ಲೀಟ್‌ ಆಕ್ಟರ್‌ ಮೋಹನ್‌ಲಾಲ್‌ ಜೊತೆಗೂ ತ್ರಿಶಾ ನಟಿಸಲಿದ್ದಾರೆ.

ಈ ವರ್ಷ ತ್ರಿಶಾ ನಟಿಸಿದ್ದ ಒಂದು ಸಿನಿಮಾವಷ್ಟೇ ತೆರೆ ಕಂಡಿತ್ತು. ಅದೇ ತಲೈವಾ ರಜಿನಿಕಾಂತ್‌ ಜೊತೆ ನಟಿಸಿದ್ದ ಪೆಟ್ಟಾ ಸಿನಿಮಾ.

 

LEAVE A REPLY

Please enter your comment!
Please enter your name here