ಪಶ್ಚಿಮ ಬಂಗಾಳ : ವಿಧಾನಸಭೆಯಲ್ಲಿ ಹೊಡೆದಾಡಿಕೊಂಡ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭೆಯ ಅಧಿವೇಶನದಲ್ಲಿ ಇಂದು ಆಡಳಿತಾರೂಡ ಟಿಎಂಸಿ ಹಾಗೂ ವಿರೋಧ ಪಕ್ಷ ಬಿಜೆಪಿಯ ಶಾಸಕರು ಹೊಡೆದಾಡಿಕೊಂಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.

ಬಿರ್ಭೂಮ್ ಘಟನೆಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಚರ್ಚೆ ನಡೆಯುವಾಗ ಈ ಘಟನೆ ನಡೆದಿದೆ. ಈ ಹೊಡದಾಟದಲ್ಲಿ ಬಿಜೆಪಿಯ ಮುಖ್ಯ ಸಚೇತಕ ಮನೋಜ್ ಟಿಗ್ಗಾ ಅವರ ಬಟ್ಟೆಯನ್ನು ಹರಿದು ಹಾಕಲಾಗಿದೆ.

ಬಿರ್ಭೂಮ್​ನಲ್ಲಿ 8 ಜನರನ್ನು ಥಳಿಸಿ ಸಜೀವ ದಹನ ಮಾಡಲಾಗಿತ್ತು. ಈ ಘಟನೆ ಬಗ್ಗೆ ಈಗಾಗಲೇ ಸಿಬಿಐ ತನಿಖೆ ನಡೆಯುತ್ತಿದೆ. ಈ ಘಟನೆ ಬಗ್ಗೆ ಪ.ಬಂಗಾಳ ಅಧಿವೇಶನದಲ್ಲಿ ಚರ್ಚೆ ನಡೆಯುವಾಗ ಟಿಎಂಸಿ ಹಾಗೂ ಬಿಜೆಪಿ ಶಾಸಕರು ಹೊಡೆದಾಡಿಕೊಂಡಿದ್ದಾರೆ.

ಟಿಎಂಸಿ ಶಾಸಕ ಅಜಿತ್ ಮಜುಂದಾರ್ ಅವರಿಗೆ ವಿರೋಧ ಪಕ್ಷದ ನಾಯಕ ಬಿಜೆಪಿ ಸುವೇಂದು ಅಧಿಕಾರಿ ಹೊಡೆದಿದ್ದು, ಮೂಗಿಗೆ ಪೆಟ್ಟಾಗಿದೆ. ಶಾಸಕ ಅಜಿತ್ ಮಜುಂದಾರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ನಡೆದ ಬೆನ್ನಲ್ಲೇ, ಸ್ಪೀಕರ್ ಭಿಮನ್ ಬ್ಯಾನರ್ಜಿಯರವು ವಿರೋಧ ಪಕ್ಷದ ನಾಯಕ ಸುವೇಂದಯ ಅಧಿಕಾರಿ ಹಾಗೂ ಇತರೆ 3 ಜನ ಶಾಸಕರನ್ನು ವರ್ಷಪೂರ್ತಿ ವಿಧಾನಸಭೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸುವೇಂದು ಅಧಿಕಾರಿ, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗೆಗಿನ ಚರ್ಚೆಯನ್ನು ಸರ್ಕಾರ ರದ್ದು ಮಾಡಿದೆ. ನಾಗರೀಕರ ವಸ್ತ್ರದಲ್ಲಿದ್ದ ಪೊಲೀಸರೂ ನಮ್ಮ ನಮ್ಮ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಮುಖ್ಯ ಸಚೇತಕ ಮನೋಗ್ ಟಿಗ್ಗಾ ಹಾಗೂ ಇತರೆ 8 ಜನ ಶಾಸಕರ ಮೇಲೆ ಹಲ್ಲೆಯಾಗಿದೆ ಎಂದು ಹೇಳಿದ್ದಾರೆ.

ಡಿಎಂಸಿ ನಾಯಕ ಹಾಗೂ ಸಚಿವ ಫಿರ್ಹಾದ್ ಹಕೀಮ್ ಮಾತನಾಡಿ, ವಿಧಾನಸಭೆಯ ಒಳಗಡೆ ನಮ್ಮ ಕೆಲವು ಶಾಸಕರು ಗಾಯಗೊಂಡಿದ್ದಾರೆ. ಬಿಜೆಪಿಯ ಈ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here