ಯಶವಂತಪುರ-ಹೌರಾ ರೈಲಿನಲ್ಲಿದ್ದ 2 ಪ್ರಯಾಣಿಕರು ಸಾವು – ಕಳಸ ಮೂಲದ 110 ಪ್ರವಾಸಿಗರೂ ಸುರಕ್ಷಿತ

ಅಪಘಾತಕ್ಕೀಡಾಗಿದ್ದ ಯಶವಂತಪುರ-ಹೌರಾ ರೈಲಿನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಈ ರೈಲಿನ ಎರಡು ಜನರಲ್​ ಬೋಗಿಗಳು ಮತ್ತು ಬ್ರೇಕ್​ ವ್ಯಾನ್​ ಹಳಿ ತಪ್ಪಿದೆ. ಹಳಿ ತಪ್ಪಿ ಪಕ್ಕದ ಹಳಿಗೆ ಬಿದ್ದಿದ್ದ ಶಾಲಿಮರ್​-ಚೆನ್ನೈ ಎಕ್ಸ್​ಪ್ರೆಸ್​ ರೈಲಿನ 12  ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತಕ್ಕೀಡಾದ ಯಶವಂತಪುರ-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ 110 ಮಂದಿಯೂ ಸುರಕ್ಷಿತವಾಗಿದ್ದಾರೆ. 
ಜೈನರ ಪುಣ್ಯಕ್ಷೇತ್ರ ಸಮ್ಮೇದ ಶಿಖರ್ಜಿಗೆ ಇದೇ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಇವತ್ತು ಬೆಳಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಟ್ಟಿದ್ದರು.
ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಧರ್ಮದ 110 ಮಂದಿ ಈ ರೈಲಿನಲ್ಲೇ ಪ್ರಯಾಣ ಬೆಳೆಸಿದ್ದರು.