ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ಓಡಿಸಲು ಬೈಕ್​ ಕೊಟ್ಟ ಮಾಲೀಕನಿಗೆ ಭಾರೀ ದಂಡ

ಅಪ್ರಾಪ್ತ ಬಾಲಕನಿಗೆ ಓಡಿಸಲು ಬೈಕ್​ ಕೊಟ್ಟ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಳ್ಳಿಗದ್ದೆ ಗ್ರಾಮದ ಪ್ರಮೋದ್​ ಎಸ್​ ಕೆ ಅವರಿಗೆ ದಂಡ ವಿಧಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಬೈಕ್​ ಚಲಾಯಿಸುತ್ತಿದ್ದ 17 ವರ್ಷದ ಬಾಲಕ ಪೊಲೀಸರ ಕೈಗೆ ಸಿಕ್ಕಿಬಿದ್ದ.

ಆ ಬಾಲಕ ಬಳಿಕ ವಾಹನ ಚಾಲನಾ ಪರವಾನಿಗೆ ಇರಲಿಲ್ಲ ಮತ್ತು ಹೆಲ್ಮೆಟ್​ ಕೂಡಾ ಧರಿಸಿರಲಿಲ್ಲ.

ಅಪ್ರಾಪ್ತ ಬಾಲಕನ ಕೈಗೆ ಬೈಕ್​ ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದಡಿಯಲ್ಲಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದರು.

ಪೊಲೀಸರು ಸಲ್ಲಿಸಿದ ದೋಷಾರೋಪಣೆ ಆಧರಿಸಿ ತೀರ್ಥಹಳ್ಳಿ ಪ್ರಧಾನ ಸಿವಿಲ್​ ನ್ಯಾಯಾಲಯ ಮತ್ತು ಜೆಎಂಎಫ್​ಸಿ ನ್ಯಾಯಾಧೀಶರು ಬೈಕ್​ ಮಾಲೀಕ ಪ್ರಮೋದ್​​ ಅವರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದರು.