ಸಂಚಾರಿ ನಿಯಮ ಉಲ್ಲಂಘನೆ: ಮತ್ತೆ ಶೇ50ರಷ್ಟು ದಂಡ ವಿನಾಯಿತಿ ಆದೇಶ

ವಾಹನ ಸವಾರರಿಗೆ ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ವಿನಾಯಿತಿ ಘೋಷಿಸಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಸೆಪ್ಟೆಂಬರ್​ 9ರೊಳಗೆ ದಂಡ ಪಾವತಿಸುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ.

ಫೆಬ್ರವರಿ 11ರವರೆಗೆ ದಾಖಲಾದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸಲಿದೆ.

ಜೂನ್​ 14ರಂದು ನಡೆದಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿ ದಂಡ ವಿನಾಯಿತಿ ನೀಡುವಂತೆ ಸಾರಿಗೆ ಇಲಾಖೆಗೆ ಸಲಹೆ ನೀಡಲಾಗಿತ್ತು.

ಈ ಸಲಹೆಯನ್ನು ಪರಿಗಣಿಸಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿದೆ.

LEAVE A REPLY

Please enter your comment!
Please enter your name here