ಲಂಚ ತಗೊಂಡು ಓಡಿಹೋಗ್ತಿದ್ದ Traffic ಪೊಲೀಸ್​ ಕಾನ್ಸ್​ಸ್ಟೇಬಲ್​ ಅಮಾನತು

ಲಂಚ ಸ್ವೀಕಾರ ಆರೋಪದಡಿಯಲ್ಲಿ ಬೆಂಗಳೂರಲ್ಲಿ ಸಂಚಾರಿ ಪೊಲೀಸ್​ ಕಾನ್ಸ್​ಸ್ಟೇಬಲ್​ನ್ನು ಅಮಾನತು ಮಾಡಲಾಗಿದೆ.
ಆ ಸಂಚಾರಿ ಪೊಲೀಸ್​ ಕಾನ್ಸ್​ಸ್ಟೇಬಲ್​ನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರ ಕಚೇರಿ ಮಾಹಿತಿ ನೀಡಿದೆ.
ಯ್ಯೂಟ್ಯೂಬ್​ ಚಾನೆಲ್​ ವಿಜಯ್​ ಟೈಮ್ಸ್​ ವರದಿಗಾರರ ತಂಡ ಸಂಚಾರಿ ಪೊಲೀಸರ ಲಂಚಾವತಾರ ಸಂಬಂಧ ಲೈವ್​ ವರದಿ ಮಾಡಿತ್ತು.
ಮಾಗಡಿ ರಸ್ತೆಯ ನೈಸ್​ ಗೇಟ್​ ಬಳಿಕ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್​ ಠಾಣೆಯ ಪೊಲೀಸರು ಲಾರಿ ಚಾಲಕರಿಂದ ಲಂಚ ವಸೂಲಿ ಮಾಡ್ತಿದ್ದಾರೆ ಎಂದು ವರದಿ ಮಾಡಿತ್ತು.
ಕ್ಯಾಮರಾ ನೋಡ್ತಿದ್ದಂತೆ ಕಿತ್ತಕೊಳ್ಳಲು ಯತ್ನಿಸಿದ್ದ ಆ ಟ್ರಾಫಿಕ್ ಪೊಲೀಸ್​ ಬಳಿಕ ರಸ್ತೆಯಲ್ಲೇ ಸಾರ್ವಜನಿಕರ ಎದುರು ಓಡಿಹೋಗಿದ್ದ.
ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.​