ಸೆಪ್ಟೆಂಬರ್​​ 30ರಂದು ತೊಟ್ಟ್​​​ ಕೀಳಲು ಥಿಯೇಟರ್​​ಗೆ ತೋತಾಪುರಿ..!

ರಾಜ್ಯಸಭಾ ಸಂಸದರೂ ಆಗಿರುವ ನವರಸನಾಯಕ ಜಗ್ಗೇಶ್​ ಮತ್ತು ಆದಿತಿ ಪ್ರಭುದೇವ್​ ನಟಿಸಿರುವ ತೋತಾಪುರಿ ಸಿನಿಮಾ ಸೆಪ್ಟೆಂಬರ್​ 30ರಂದು ತೆರೆಗೆ ಅಪ್ಪಳಿಸಲಿದೆ.
ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾಪ್ರೇಕ್ಷಕರಿಗೆ ಶುಭಾಶಯ ತಿಳಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಿದೆ.
ತೋತಾಪುರಿ ಪಾರ್ಟ್​ 2 ಬರುವ ಬಗ್ಗೆಯೂ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.
ತೋತಾಪುರಿ ಸಿನಿಮಾದಲ್ಲಿ ಡಾಲಿ ಧನಂಜಯ್​, ಸುಮನಾ ರಂಗನಾಥ್​, ದತ್ತಣ್ಣ ನಟಿಸಿದ್ದಾರೆ.
ಕೆ ಎಂ ಸುರೇಶ್​ ತೋತಾಪುರಿಯನ್ನು ನಿರ್ಮಿಸಿದ್ದಾರೆ. ವಿಜಯಪ್ರಸಾದ್​ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ತೋತಾಪುರಿ-1 ಬಿಡುಗಡೆ ಬಗ್ಗೆ ಪೋಸ್ಟರ್​ ಹಂಚಿಕೊಂಡಿರುವ ನಟ ಜಗ್ಗೇಶ್​ ನಗುವಿನ ಹಬ್ಬಕ್ಕೆ ಸಿದ್ಧರಾಗಿ ಎಂದು ಹೇಳಿದ್ದಾರೆ.
ತೋತಾಪುರಿ ಪಾರ್ಟ್​​ -1ನಲ್ಲಿ ತೊಟ್ಟ್​​ ಕೀಳ್ಬೇಕಷ್ಟೇ ಎಂಬ ಟ್ಯಾಗ್​ಲೈನ್​ ಇದ್ರೆ, ತೋತಾಪುರಿ ಪಾರ್ಟ್​​ -2ಗೆ ತೊಟ್ಟ್​​ ಕಿತ್ತಾಯ್ತು ಎಂಬ ಟ್ಯಾಗ್​ಲೈನ್​ ಇದೆ.

LEAVE A REPLY

Please enter your comment!
Please enter your name here