ಟೋಲ್​ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ – ಚಪ್ಪಲಿಯಿಂದ ತಿರುಗಿ ಬಾರಿಸಿದ ಮಹಿಳೆ

ಟೋಲ್​ ಕಟ್ಟುವಂತೆ ಹೇಳಿದ ಟೋಲ್​ನ (Toll Booth) ಮಹಿಳಾ ಸಿಬ್ಬಂದಿ ಮೇಲೆ ವಾಹನ ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ.
ಹಲ್ಲೆಯ ವೀಡಿಯೋ ಟೋಲ್​ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮಧ್ಯಪ್ರದೇಶ ರಾಜ್ಯದ (Madyapradesh) ರಾಜ್​ಘರ್ (Rajgarh)​ ಜಿಲ್ಲೆಯ ರಾಜ್​ಘರ್​-ಭೋಪಾಲ್ (Bhopal)​ ಹೆದ್ದಾರಿಯಲ್ಲಿ ಬರುವ ಕಚ್​ನಾರಿಯಾ ಟೋಲ್​ನಲ್ಲಿ ನಡೆದಿದೆ.
ಟೋಲ್​ ಕಟ್ಟುವಂತೆ ಮತ್ತು ಟೋಲ್​ ಕಟ್ಟದೇ ಹೋಗಲು ಬಿಡಲ್ಲ ಎಂದು ಆ ಮಹಿಳಾ ಸಿಬ್ಬಂದಿ ಹೇಳಿದ್ದಾರೆ.
ಮೊದಲಿಗೆ ಆ ವಾಹನ ಮಾಲೀಕ ಟೋಲ್​ನ ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಗೆ ಪ್ರತಿದಾಳಿಯಾಗಿ ಆಕೆ ತನ್ನ ಚಪ್ಪಲಿಯಿಂದ ಆತನಿಗೆ ತಿರುಗಿ ಬಾರಿಸಿದ್ದಾಳೆ.

ವಾಹನ ಮಾಲೀಕನ ವಿರುದ್ಧ ಎಫ್​ಐಆರ್ (FIR)​ ದಾಖಲಾಗಿದೆ.

LEAVE A REPLY

Please enter your comment!
Please enter your name here