ಇಮ್ರಾನ್ ಖಾನ್‌ಗೆ ತುಂಟಿಯಾದ ಪತ್ನಿ ಬೇಕಾಗಿದೆ – ನಾಲ್ಕನೆ ಹೆಂಡತಿ ಆಗ್ತೀನಿ ಎಂದಳಲ್ಲ ಟಿಕ್‌ಟಾಕ್ ಸ್ಟಾರ್!

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಮದುವೆ ಮಾಡಿಕೊಳ್ಳಬೇಕು ಎಂದಿದೆ ಎಂದು ಬ್ರಿಟನ್‌ನ ಟಿಕ್‌ಟಾಕ್ ಸ್ಟಾರ್ ಒಬ್ಬರು ಪ್ರಪೋಸ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಮ್ರಾನ್ ಖಾನ್‌ಗೆ ನಾಲ್ಕನೇ ಪತ್ನಿ ಆಗುತ್ತೇನೆ ಎಂದು ಟಿಕ್‌ಟಾಕರ್ ಜಿಯಾ ಖಾನ್ ನೀಡಿರುವ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಇಮ್ರಾನ್ ಖಾನ್ ಮೊದಲು ಜೆಮಿಮಾರನ್ನು ಮದುವೆಯಾದರು. ಆ ನಂತರ ಸುಂದರಿ ಪತ್ರಕರ್ತೆಯೊಬ್ಬರು ಎರಡನೇ ಪತ್ನಿಯಾಗಿ ಬಂದರು. ಮೂರನೇ ಬಾರಿ ಸಂಪ್ರದಾಯಸ್ಥ ಮಹಿಳೆಯನ್ನು ಮದುವೆಯಾದರು.. ಈಗ ಇಮ್ರಾನ್ ಜೀವನದಲ್ಲಿ ಗ್ಲಾಮರ್ ತುಂಬಬೇಕಾದ ಅಗತ್ಯವಿದೆ. ಅವರಿಗೆ ತುಂಟಿಯಾದ ಪತ್ನಿ ಬೇಕಿದೆ. ನಾನು ಅವರನ್ನು ಮದುವೆಯಾಗಬೇಕು ಎಂದಿರುವೆ. ನಾಲ್ಕನೆ ಪತ್ನಿಯಾಗಲು ನಾನು ರೆಡಿ. ಇದಕ್ಕಾಗಿ ಬುಷ್ರಾ ಬಿಬಿಯ ಬಂಧವನ್ನು ತುಂಡರಿಸಲು ಕೂಡ ನಾನು ರೆಡಿ.. ಅವರ ವಯಸ್ಸು ಈಗ 70.. ಅದೇನು ನನಗೆ ಸಮಸ್ಯೆಯಲ್ಲ… ಯಾಕಂದ್ರೆ ಅವರು ಇಮ್ರಾನ್ ಖಾನ್

ಎಂದು ಜಿಯಾ ಖಾನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇಮ್ರಾನ್ ಖಾನ್ ರಾಜಕೀಯವಾಗಿ ಕೇಸ್, ಅರೆಸ್ಟ್ ಎಂದು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ಅಬರಿಗೆ ಹೊಸ ಅಭಿಮಾನಿ ಸಿಕ್ಕಿದ್ದಾರೆ ನೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.