ಟಿಕ್​ಟಾಕ್​ ಬಳಸುವವರ ಸಂಖ್ಯೆ ಎಷ್ಟು ಗೊತ್ತಾ..?

ಟಿಕ್​ ಟಾಕ್ ಬಳಸದಿರೋರು ಯಾರಿದ್ದಾರೆ..? ಸ್ಮಾರ್ಟ್​ಫೋನ್​​ ಜಮಾನದಲ್ಲಿ ಥರ ಥರ ಸೋಷಿಯಲ್ ಮೀಡಿಯಾ ಆಪ್​​ಗಳು ಬರುತ್ತಿವೆ. ಅದ್ರಲ್ಲಿ ಟಿಕ್​ಟಾಕ್ ಕೂಡ ಒಂದು.. ಸಿನಿಮಾ ಹಾಡುಗಳು, ಡೈಲಾಗ್​, ಮ್ಯೂಸಿಕ್​​ಗಳಿಗೆ ಜನರೇ ಡಬ್​ ಮಾಡುತ್ತಲೇ ಅಥವಾ ಇನ್ನೇನೋ ಕೀಟಲೆ ಮಾಡಿಯೋ ವೀಡಿಯೋ ಹಾಕುವುದು ಇದೀಗ ಟ್ರೆಂಡ್ ಆಗಿದೆ. ಇಂತಾ ಟಿಕ್​ ಟಾಕ್ ಆಪ್ ಬಳಸೋರ ಸಂಖ್ಯೆ ಎಷ್ಟು ಗೊತ್ತಾ..?

ಟಿಕ್​ ಟಾಕ್ ಆಪ್​ ಬರೋಬ್ಬರಿ 1.5 ಬಿಲಿಯನ್​​ ಡೌನ್​ಲೋಡ್ ಆಗಿದೆ. ಅಂದ್ರೆ ವಿಶ್ವದಾದ್ಯಂತ ಬರೋಬ್ಬರಿ 150 ಕೋಟಿ ಜನ ಈ ಆಪ್​ ಬಳಸುತ್ತಿದ್ದಾರೆ.ಈ ವರ್ಷ ಟಿಕ್​ಟಾಕ್​ ಆಪ್​ 3ನೇ ಸ್ಥಾನಲ್ಲಿದೆ.

ಮೊದಲ ಸ್ಥಾನದಲ್ಲಿ ವಾಟ್ಸಾಪ್​​ ಇದೆ. 2ನೇ ಸ್ಥಾನದಲ್ಲಿ ಮೆಸೆಂಜರ್​, 3ನೇ ಸ್ಥಾನ ಟಿಕ್​ಟಾಕ್​, 4ನೇ ಸ್ಥಾನಕ್ಕೆ ಫೇಸ್​ಬುಕ್ ಕುಸಿದಿದೆ. ಇನ್​ಸ್ಟಾಗ್ರಾಂ 5ನೇ ಸ್ಥಾನದಲ್ಲಿದೆ.ಚೀನಾ ಮೂಲದ ಈ ಟಿಕ್​ ಟಾಕ್​, 2017ರಲ್ಲಿ ವಿಶ್ವದಾದ್ಯಂತ ಪರಿಚಯ ಆಯ್ತು. ಕೇವಲ 2 ವರ್ಷದಲ್ಲಿ ಇದು ಮಾಡಿದ ಸೌಂಡ್ ಮಾತ್ರ ಅಷ್ಟಿಷ್ಟಲ್ಲ. ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರೂ ಮರುಳಾಗದ್ದಾರೆ ಈ ಟಿಕಟಾಕ್‌ ನ ಮೋಡಿಗೆ.

LEAVE A REPLY

Please enter your comment!
Please enter your name here