ತಮಗೆ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಎನ್ನುವವರು ಸುಲಿಗೆ, ಜೀವ ಬೆದರಿಕೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆಯವರು ದೂರು ದಾಖಲಿಸಿದ್ದಾರೆ.
ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್, ಆಕೆಯ ಸ್ನೇಹಿತ ತಿಲಕರಾಜ್ ಡಿ.ಟಿ. ವಿರುದ್ಧ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವ್ಯಶ್ರೀಯದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್ ಬೆನ್ನಲ್ಲೇ, ನವ್ಯಶ್ರೀ ರಾವ್ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ದೂರು ಸಲ್ಲಿಸಿದ್ದಾರೆ. ರಾಜಕುಮಾರ ಟಾಕಳೆ ಈ ಹಿಂದೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿದ್ದರು.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿರುವ ರಾಜಕುಮಾರ ಟಾಕಳೆಯವರು, ಡಿಸೆಂಬರ್ 2020ರಲ್ಲಿ ತಾವು ಬೆಂಗಳೂರಲ್ಲಿ ಕೆಲಸ ಮಾಡುವಾಗ ನವ್ಯಶ್ರೀ ಆರ್.ರಾವ್ ಪರಿಚಯ ಆಗಿದ್ದರು. ಸಾಫ್ಟ್ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡಿದ್ದ ಈಕೆ, ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್ಜಿಒ ನಡೆಸುವುದಾಗಿ ಹೇಳಿಕೊಂಡಿದ್ದಳು.
ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆ ಬೆಳಿಸಿಕೊಂಡಿದ್ದರು. ಒಂದೂವರೆ ವರ್ಷ ಪರಿಚಯದಲ್ಲಿ ಬೇರೆ ಬೇರೆ ಸ್ಥಳ ಸೇರಿದಂತೆ ಬೆಳಗಾವಿಯಲ್ಲಿಯೂ ಭೇಟಿಯಾಗಿದ್ದೆವು.
ಆದರೆ, 2021ರ ಡಿಸಂಬರ್ 24ರಂದು ನನಗೆ ಕರೆ ಮಾಡಿ ನವ್ಯಶ್ರೀ ಹಾಗೂ ನಾನು ಆತ್ಮೀಯವಾಗಿ ಇರುವ ವಿಡಿಯೋ ಇದೆ ಎಂದು ನವ್ಯಶ್ರೀ ಹಾಗೂ ತಿಲಕರಾಜ್ರಿಂದ ಬೆದರಿಕೆ ಹಾಕಿದ್ದಾರೆ. 50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ ಮತ್ತು ತನ್ನ ಹಘಾಊ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
ಇದೀಗ, ವಿರುದ್ಧ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನವ್ಯಶ್ರೀ ವಿರುದ್ಧ ಐಪಿಸಿ 1860(u/s.384, 448, 504, 506, 34) ರಡಿ ಕೇಸ್ ದಾಖಲು ಮಾಡಿದ್ದಾರೆ.