ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದ ಯುವಕನ ಮೇಲೆ ಯುವತಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
22 ವರ್ಷದ ಯುವಕ (ಅರ್ಜಿದಾರ) ಮತ್ತು ದೂರುದಾರೆ ಯುವತಿಯು ʻಬಂಬಲ್ʼ ಎಂಬ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದರು.
ʻಡೇಟಿಂಗ್ ಆಪ್ಗಳ ಅಪಾಯದ ಬಗ್ಗೆ ಈ ಪ್ರಕರಣವೇ ಉದಾಹರಣೆ. ʻಬಂಬಲ್ʼ ಎಂಬ ಡೇಟಿಂಗ್ ಆಪ್ನಲ್ಲಿ ದೂರುದಾರೆ ಯುವತಿ ಮತ್ತು ಯುವಕ ಪರಿಚಯವಾಗಿದ್ದರು. ಬಳಿಕ ಇಬ್ಬರ ಭೇಟಿ ಇವರನ್ನು ಓಯೋ ರೂಮ್ಗೆ ಕರೆದುಕೊಂಡು ಹೋಯಿತು. ಮರು ದಿನ ಆ ಯುವಕ ಯುವತಿ ಮನೆಗೆ ಹೋದ. ಅದರ ಮರು ದಿನವೇ ಯುವತಿ ಪೊಲೀಸ್ ಠಾಣೆಗೆ ತೆರಳಿ ಐಪಿಸಿ ಕಲಂ 376ರಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ಳುʼ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆ ವೇಳೆ ಹೇಳಿದರು.
ʻಅರ್ಜಿದಾರರು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ಆರೋಪವೇ ಇಲ್ಲ. ದೂರುದಾರೆಯ ಪ್ರಕಾರವೇ ಅವೆಲ್ಲವೂ ಒಮ್ಮತದಿಂದಲೇ ಆಗಿತ್ತು. ಆದರೆ ಆ ಒಪ್ಪಿಗೆಯನ್ನು ಬಲವಂತದಿಂದ ಪಡೆದಿದ್ದಾರೆ ಎನ್ನುವುದು ಆಕೆಯ ಆರೋಪʼ ಎಂದು ಹೈಕೋರ್ಟ್ ಹೇಳಿತು.
ʻಇದು ಒಮ್ಮತದ ಲೈಂಗಿಕ ಕ್ರಿಯೆಯ ಪ್ರಕರಣʼ ಎಂದು ಅರ್ಜಿದಾರ ಯುವಕ 22 ವರ್ಷದ ಸಂಪ್ರಾಸ್ ಆಂಟನಿ ಪರ ವಕೀಲರು ವಾದಿಸಿದರು,
ಇದೇ ವರ್ಷದ ಆಗಸ್ಟ್ನಲ್ಲಿ ಡೇಟಿಂಗ್ ಆಪ್ ಬಂಬಲ್ ಮೂಲಕ ಆನ್ಲೈನ್ನಲ್ಲಿ ಇಬ್ಬರೂ ಚ್ಯಾಟಿಂಗ್ ನಡೆಸಿದ್ದರು. ಬಳಿಕ ಇಬ್ಬರೂ ಭೇಟಿ ಆಗುವುದಕ್ಕೆ ನಿರ್ಧರಿಸಿದ್ದರು ಮತ್ತು ಆ ನಂತರ ಇಬ್ಬರು ದೈಹಿಕ ಸಂಪರ್ಕ ಹೊಂದಿದರು. ಮರು ದಿನವೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವಕನ ಮೇಲೆ ಯುವತಿ ಪೊಲೀಸರಿಗೆ ದೂರು ನೀಡಿದಳು.
ತನಿಖಾಧಿಕಾರಿ ತನ್ನ ಆಲೋಚನಾ ಶಕ್ತಿಯನ್ನು ಬಳಸದೇ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ʻಆರೋಪಿ ಮತ್ತು ದೂರುದಾರೆ ನಡುವೆ ನಡೆದಿದ್ದ ಆನ್ಲೈನ್ ಚ್ಯಾಟಿಂಗ್ನ್ನು ಆರೋಪಪಟ್ಟಿಯಲ್ಲಿ ಬಳಸಿಕೊಂಡಿಲ್ಲʼ ಎಂದು ಹೇಳಿ ತನಿಖೆಗೆ ತಡೆಯಾಜ್ಞೆಯನ್ನು ನೀಡಿದರು.
ADVERTISEMENT
ADVERTISEMENT