ಕಾಂಗ್ರೆಸ್ ಮುಖಂಡನ ಮನೆ ಕಳ್ಳತನ ಸಂಬಂಧ ಇಬ್ಬರನ್ನು ಬಂಧಿಸಿಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರುವಿನಲ್ಲಿ ಕಾಂಗ್ರೆಸ್ ಮುಖಂಡ ಶಂಸುದ್ದೀನ್ ಮನೆಯಲ್ಲಿ ಕಳ್ಳತನವಾಗಿತ್ತು.
ಕೃತ್ಯ ಎಸಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಫಯಾಜ್ನನ್ನು ಸಕಲೇಶಪುರದಲ್ಲಿ ಮತ್ತು ಪ್ರಸನ್ನನನ್ನು ಬೆಂಗಳೂರಿನ ಗೋವಿಂದ ನಗರದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು.
ಈ ಆರೋಪಿಗಳ ವಿರುದ್ಧ 30 ದರೋಡೆ ಪ್ರಕರಣಗಳಿವೆ.
ಈ ಆರೋಪಿಗಳು ಕಾಸರಗೋಡಿಗೆ ಹೋಗುತ್ತಿದ್ದರು. ಆಗ ಮನೆಯ ಗೇಟಿನಲ್ಲಿ ನ್ಯೂಸ್ಪೇಪರ್ ಬಿದ್ದಿರುವುದನ್ನು ಕಂಡು ಕಳ್ಳತನಕ್ಕೆ ನಿರ್ಧರಿಸಿದರು.
ADVERTISEMENT
ADVERTISEMENT