ಬೆಂಗಳೂರಿನ ಉತ್ತರ ಭಾಗದಲ್ಲಿರುವ ಹೆಬ್ಬಾಳ ಪ್ಲೈ ಓವರ್ ನಲ್ಲಿ ಪ್ರತಿದಿನವೂ ಸಂಚಾರ ದಟ್ಟಣೆ ಕಂಡು ಬರುತ್ತದೆ. ಈ ಸಂಚಾರ ದಟ್ಟಣೆಯ ನಿಯಂತ್ರಣಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ತಾತ್ಕಾಲಿಕ ಮುಕ್ತಿ ನೀಡಿದ್ದು, ವಾಹನ ಸವಾರರಿಗೆ ಲೂಪ್ ಪ್ಲೈಓವರ್ ಬಳಸುವಂತ ಸೂಚನೆ ನೀಡಿದೆ.
ಸಂಚಾರಿ ತಜ್ಞರ ತಂಡ ಬೆಂಗಳೂರಿನ ಕನಿಷ್ಠ 10 ಟ್ರಾಫಿಕ್ ಜಂಕ್ಷನ್ ಗಳ ಅಧ್ಯಯನ ಮಾಡಿದ್ದು, ಇದರಲ್ಲಿ ಹೆಬ್ಬಾಳ ಫ್ಲೈ ಓವರ್ ಅತಿ ಹೆಚ್ಚಿನದಾಗಿ ವಾಹನ ದಟ್ಟಣೆಯ ಸಮಸ್ಯೆ ಎದುರಿಸಿದೆ ಎಂದು ತಿಳಿಸಿದೆ.
ಈವರೆಗೆ ಎರಡು ಅಧ್ಯಯನ ಮಾಡಲಾಗಿದೆ. ವಾಹನ ದಟ್ಟಣೆ ಎಷ್ಟು, ಪೀಕ್ ಅವರ್ ಎಷ್ಟು, ಹೊರ ರಾಜ್ಯದಿಂದ ಎಷ್ಟು ವೆಹಿಕಲ್ ಬರುತ್ತೆ ಅನ್ನೋದರ ಬಗ್ಗೆಯೂ ಸಂಚಾರಿ ತಜ್ಞರು ಅಧ್ಯಯನ ಮಾಡಲಾಗಿದೆ.
ಫ್ಲೈ ಓವರ್ ಮೇಲೆ 45,000 ವೆಹಿಕಲ್ ಗಳು ಸಂಚಾರ ಮಾಡ್ತಿವೆ. ಕಳೆದ ಮೂರು ದಿನಗಳಿಂದ ಸೂಚನಾ ಫಲಕ ನೀಡಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಬರುವ ವೆಹಿಕಲ್ ಗಳು ಲೂಪ್ ಮುಖಾಂತರ ಹೋಗಿ ನಗರ ಪ್ರವೇಶ ಮಾಡಬಹುದು.
ಯಲಹಂಕ , ಬ್ಯಾಟರಾಯನಪುರ, ಕೊಡಿಗೇಹಳ್ಳಿ ಅಮೃತಹಳ್ಳಿ ಕಡೆಯಿಂದ ಬರುವವರು ಲೂಪ್ ಫ್ಲೈ ಓವರ್ ಬಳಿ ತೆಗೆದುಕೊಂಡು ನಗರ ಪ್ರವೇಶ ಮಾಡಬೇಕು ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರ ಪ್ರದೇಶದಿಂದ ಬರುವ ಬಸ್ ಗಳು ಬಸ್ ಬೇರೆ ಸ್ಟಾಪ್ ಗೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆಟೋ ಸ್ಟ್ಯಾಂಡ್ ಕೂಡ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಪ್ರಾಯೋಗಿಕವಾಗಿ ಶುಕ್ರವಾರದಿಂದ ಈ ನಿಯಮಗಳು ಜಾರಿಗೆ ತರಲಾಗುತ್ತದೆ.
ಈ ನಿಯಮಗಳಿಂದ ಶೇ.90ರಷ್ಟು ಅನುಕೂಲವಾಗಲಿದೆ. ಶೇ.10ರಷ್ಟು ಜನರಿಗೆ ಅನಾನೂಕೂಲವಾಗಲಿದೆ ಎಂದು ಅಧ್ಯಯನ ತಂಡ ಹೇಳಿದೆ.
ಹೆಬ್ಬಾಳ ಬಳಿ ಟ್ರಾಫಿಕ್ ಕಂಟ್ರೋಲ್ ಮಾಡಲು ಇದು ಅವಶ್ಯಕವಾಗಿದೆ ಎಂದು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.