Karnataka: 2 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ TATA ಆಸಕ್ತಿ

ದೇಶದ ದೈತ್ಯ ಉದ್ಯಮ ಸಂಸ್ಥೆ ಟಾಟಾ ಟೆಕ್ನಾಲಜೀಸ್​ ಕರ್ನಾಟಕದಲ್ಲಿ ಬೃಹತ್​ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿದೆ.

ದೇಶದ ಪ್ರತಿಷ್ಠಿತ #ಟಾಟಾಟೆಕ್ನಾಲಜೀಸ್ ಸಂಸ್ಥೆಯು ರಾಜ್ಯದಲ್ಲಿ ಬೃಹತ್ ಹೂಡಿಕೆಮಾಡಿ ಉದ್ಯಮ ಸ್ಥಾಪಿಸಲು ಆಸಕ್ತಿ ತೋರಿದೆ.

ಈ ಕುರಿತಂತೆ ಇಂದು ಕಂಪೆನಿಯ ಉನ್ನತ ಅಧಿಕಾರಿಗಳು ನನ್ನನ್ನು ಭೇಟಿಯಾಗಿ ಚರ್ಚಿಸಿದರು.

ಟಾಟಾ ಟೆಕ್-ನೇತೃತ್ವದ ಒಕ್ಕೂಟವು ಕರ್ನಾಟಕದಲ್ಲಿ ರೊಬೊಟಿಕ್ ತಂತ್ರಜ್ಞಾನದ ಸುಧಾರಿತ ಉತ್ಪಾದನೆ, ವಿದ್ಯುತ್ ಚಾಲಿತ ವಾಹನ, ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳಲ್ಲಿ ರೂ. 2, 000 ಕೋಟಿ ಹೂಡಿಕೆಯನ್ನು ಪ್ರಸ್ತಾಪಿಸಿದೆ.

ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವು ನೂತನ ತಂತ್ರಜ್ಞಾನಗಳೊಂದಿಗೆ ದೇಶದಲ್ಲೇ ಮುಂಚೂಣಿಯಲ್ಲೇ ಇರುವಂತೆ ಮಾಡಲು ಸಿದ್ದಗೊಳ್ಳುತ್ತಿದ್ದೇವೆ

ಎಂದು ಬೃಹತ್​ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್​ ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here