ಪ್ರಮುಖ ವಾಹನ ಉತ್ಪಾದಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡಿದೆ.
Weighted Average ಸೂತ್ರದಡಿ ಶೇ 0.55ರಷ್ಟು ಬೆಲೆ ಹೆಚ್ಚಳ ಮಾಡಿರುವುದಾಗಿ ಟಾಟಾ ಮೋಟಾರ್ಸ್ ಘೋಷಿಸಿದೆ.
ಪ್ರಯಾಣಿಕ ವಾಹನಗಳ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ. ಹೊಸ ದರ ಇವತ್ತಿನಿಂದಲೇ ಅನ್ವಯ ಆಗಲಿದೆ.
ಇದೇ ತಿಂಗಳು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಶೇಕಡಾ 1.5ರಿಂದ 2.5ರವರೆಗೆ ಹೆಚ್ಚಳ ಮಾಡಿತ್ತು.