ಐಪಿಎಲ್ನ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳಿಗೆ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಮೊದಲ ಪ್ಲೇ ಆಫ್ ಮತ್ತು ಎಲಿಮಿನೇಟರ್ ಪಂದ್ಯಗಳು ಕ್ರಮವಾಗಿ ಮೇ 24 ಮತ್ತು 26 ರಂದು ಕೋಲ್ಕತ್ತಾದಲ್ಲಿ, ಎರಡನೇ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ಕ್ರಮವಾಗಿ ಮೇ 27 ಮತ್ತು 29 ರಂದು ಅಹಮದಾಬಾದ್ನಲ್ಲಿ ನಡೆಯಲಿವೆ ಎಂದು ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಅವರು ತಿಳಿಸಿದರು.
ಮೂರು ತಂಡಗಳ ಮಹಿಳಾ ಚಾಲೆಂಜರ್ ಟೂರ್ನಿಯು ಮೇ 24 ರಿಂದ 28 ರವರೆಗೆ ಲಖನೌನಲ್ಲಿ ನಡೆಯಲಿವೆ ಎಂದು ಗಂಗೂಲಿ ಇದೇ ವೇಳೆ ತಿಳಿಸಿದರು.
ADVERTISEMENT
ADVERTISEMENT