ತಮಿಳುನಾಡು CM ಮಗನಿಗೆ ED ಆಘಾತ

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ ಆಘಾತ ನೀಡಿದೆ. 

ಸ್ಟಾಲಿನ್​ ಅವರ ಪುತ್ರ ಉದಯಾನಿಧಿ ಸ್ಟಾಲಿನ್​ ನಡೆಸುತ್ತಿರುವ ಉದಯಾನಿಧಿ ಸ್ಟಾಲಿನ್​ ಫೌಂಡೇಷನ್​ನ ಆಸ್ತಿಯನ್ನು ಜಾರಿನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಫೌಂಡೇಷನ್​ನ 37 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಚೆನ್ನೈ ಮೂಲದ ಕಲ್ಲಾಲ್​ ಗ್ರೂಪ್​ ಪ್ರಕರಣದಲ್ಲಿ ಸ್ಟಾಲಿನ್​ ಫೌಂಡೇಷನ್​ನ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಜಫ್ತಿ ಮಾಡಿಕೊಳ್ಳಲಾದ ಆಸ್ತಿಯಲ್ಲಿ 36.3 ಕೋಟಿ ರೂಪಾಯಿ ಆಸ್ತಿ ಮತ್ತು 34.7 ಲಕ್ಷ ರೂಪಾಯಿ ಬ್ಯಾಂಕ್​ ಠೇವಣಿ ಒಳಗೊಂಡಿದೆ ಈಡಿ ಹೇಳಿದೆ.

ಮುಖ್ಯಮಂತ್ರಿಯಾಗಿರುವ ಎಂ ಕೆ ಸ್ಟಾಲಿನ್​ ಸಂಪುಟದಲ್ಲಿ ಉದಯಾನಿಧಿ ಸ್ಟಾಲಿನ್​ ಅವರು ಕ್ರೀಡಾ ಮತ್ತು ಯುವಜನ ಖಾತೆ ಸಚಿವರಾಗಿದ್ದಾರೆ.