ತಮಿಳು ನಟ ವಿಕ್ರಮ್​ಗೆ ಹೃದಯಾಘಾತ

ಖ್ಯಾತ ತಮಿಳು ನಟ ಚಿಯಾನ್​ ವಿಕ್ರಮ್(56)​ಗೆ ಹೃದಯಾಘಾತವಾಗಿದೆ. ಇವರನ್ನು ಇಂದು ಶುಕ್ರವಾರ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಕಾಏಕಿ ಹೃದಯಾಘಾತವಾಗಿದೆ. ನಟ ವಿಕ್ರಮ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರ ಮಾಹಿತಿ ನೀಡಿದ್ದಾರೆ.

ಇಂದು ಸಾಯಂಕಾಲ 6 ಗಂಟೆಗೆ ಚೆನ್ನೈನಲ್ಲಿ ಇವರ ನಟನೆಯ ಪೊನ್ನಿಯನ್ ಸೆಲ್ವನ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸಿಕೊಳ್ಳುವಾಗ ಈ ಅವಘಡ ನಡೆದಿದೆ.

ವಿಕ್ರಮ್ ನಟನೆಯ ಬಹುನಿರೀಕ್ಷಿತ ಚಿತ್ರಗಳಾದ ಪೊನ್ನಿಯನ್ ಸೆಲ್ವನ್  ಹಾಗೂ ಕೋಬ್ರಾ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ.

LEAVE A REPLY

Please enter your comment!
Please enter your name here