ಟಿ-20 ವಿಶ್ವಕಪ್: ಭಾರತದ ನೂತನ ಜೆರ್ಸಿ ಅನಾವರಣ

ಅಕ್ಟೋಬರ್ 17 ರಿಂದ ಆರಂಭವಾಗಲಿರುವ ವಿಶ್ವ ಟಿ-20 ವಿಶ್ವಕಪ್​ಗೆ ಭಾರತ ತಂಡದ ನೂತನ ಜೆರ್ಸಿಯನ್ನು ಬಿಸಿಸಿಐ ಅನಾವರಣ ಮಾಡಿದೆ.

ಬಿಸಿಸಿಐ, ಭಾರತ ತಂಡದ ನೂತನ ಸಮವಸ್ತ್ರದ ಫೋಟೊವನ್ನು ಟ್ವೀಟ್‌ ಮಾಡಿದ್ದು, ಫೋಟೊದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಉಪನಾಯಕ ರೋಹಿತ್‌ ರ‍್ಮಾ, ಆಲ್‌ರೌಂಡರ್‌ ರವೀಂದ್ರ ಜಡೇಜಾ, ಕೆಎಲ್‌ ರಾಹುಲ್ ಮತ್ತು ಜಸ್‌ಪ್ರೀತ್‌ ಬುಮ್ರಾ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ತಂಡದ ಈ ನೂತನ ಸಮವಸ್ತ್ರಕ್ಕೆ ‘ಬಿಲಿಯನ್‌ ಚಿಯರ್ಸ್ ಜೆರ್ಸಿ’ ಎಂದು ಹೆಸರಿಡಲಾಗಿದೆ.

ಅಕ್ಟೋಬರ್‌ 17 ರಿಂದ ನವೆಂಬರ್‌ 14 ರವರೆಗೆ ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ಟಿ-20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಭಾರತ ತಂಡ ಅಕ್ಟೋಬರ್‌ 24 ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ಅ.18 ಮತ್ತು ಅ.20 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಭ್ಯಾಸ ಪಂದ್ಯಗಳಲ್ಲೇ ಭಾರತ ತಂಡ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದೆ.

ಟಿ-20 ವಿಶ್ವಕಪ್​ಗೆ ಟೀಮ್ ಇಂಡಿಯಾ ತಂಡ ಇಂತಿದೆ- ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಕೆಎಲ್‌ ರಾಹುಲ್‌, ಸೂರ್ಯಕುಮಾರ್‌ ಯಾದವ್, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಇಶಾನ್ ಕಿಶನ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್‌, ರವಿಚಂದ್ರನ್‌ ಆಶ್ವಿನ್, ಅಕ್ಷರ್‌ ಪಟೇಲ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.

ಕಾಯ್ದಿರಿಸಿದ ಆಟಗಾರರು: ಶ್ರೇಯಸ್‌ ಅಯ್ಯರ್‌, ಶಾರ್ದೂಲ್ ಠಾಕೂರ್‌, ದೀಪಕ್ ಚಹರ್‌, ಅವೇಶ್ ಖಾನ್, ವೆಂಕಟೇಶ್ ಅಯ್ಯರ್‌.

LEAVE A REPLY

Please enter your comment!
Please enter your name here