ADVERTISEMENT
ಅತ್ಯಾಚಾರ ಎಸಗಿ ಬಳಿಕ ಆ ವೀಡಿಯೋವನ್ನು ತೋರಿಸಿ ಮಹಿಳೆಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪದಡಿಯಲ್ಲಿ ನಟ ಮತ್ತು ನಿರ್ಮಾಪಕ ಸ್ವಯಂಕೃಷಿ ವೀರೇಂದ್ರ ಬಾಬುವನ್ನು ಬೆಂಗಳೂರಿನ ಕೋಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ಸಂಬಂಧ ವೀರೇಂದ್ರ ಬಾಬು ವಿರುದ್ಧ 2021ರಲ್ಲಿ ದೂರು ದಾಖಲಾಗಿತ್ತು.
ಆ ವೀಡಿಯೋವನ್ನು ಬಹಿರಂಗ ಮಾಡುವುದಾಗಿ ಬೆದರಿಸಿದ್ದ ವೀರೇಂದ್ರ ಬಾಬು ಆ ಮಹಿಳೆಯಿಂದ 15 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ.
ಈಗ ಮತ್ತೆ ಜುಲೈ 30ರಂದು ಆ ಮಹಿಳೆಯನ್ನು ಮತ್ತೆ ಕರೆಯಿಸಿ ಕಾರಿನಲ್ಲಿ ಸುತ್ತಾಡಿಸಿ ಗನ್ ತೋರಿಸಿ ಬೆದರಿಸಿ ಮೈಮೇಲಿದ್ದ ಚಿನ್ನಾಭರಣ ದೋಚಿದ ಆರೋಪದಡಿಯಲ್ಲಿ ವೀರೇಂದ್ರಬಾಬು ಮತ್ತು ಆತನ ಸ್ನೇಹಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ADVERTISEMENT